




ಕಡಬ ಟೈಮ್ಸ್(KADABA TIMES):ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿದ್ದು, ಅದು ಜುಲೈ 20 ರಂದು ಕರ್ನಾಟಕದ ಗೋಕರ್ಣ ಅಥವಾ ಗೋವಾ ಮತ್ತು ರತ್ನಗಿರಿ ಕರಾವಳಿ ಕಡೆಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಚಂಡಮಾರುತವು ತೀವ್ರ ಸ್ವರೂಪದ್ದಾಗಿದ್ದು, ಜುಲೈ 20 ರ ಬಳಿಕ ಗೋಕರ್ಣ, ಗೋವಾ, ಮುಂಬಯಿ, ಪೂನಾ ಸೇರಿದಂತೆ ಕೊಂಕಣ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.ಮುಂದಿನ 8 ದಿನಗಳ ಕಾಲ ಕೊಂಕಣ, ಗೋವಾ, ಗೋಕರ್ಣ, ಮುಂಬಯಿಗೆ ಯಾರೂ ಪ್ರವಾಸ ಕೈಗೊಳ್ಳಬಾರದೆಂದು ಸೂಚನೆ ನೀಡಲಾಗಿದೆ.

ಚಂಡಮಾರುತವು ಜುಲೈ 20 ರಿಂದ 26 ಕ ತನಕ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿರುತ್ತದೆ. ಆದ್ದರಿಂದ ದಾಮನ್ನಿಂದ ಮಂಗಳೂರುವರೆಗಿನ ಕರಾವಳಿಯ ಜನರು ಎಚ್ಚರಿಕೆಯಿಂದ ಇರಬೇಕೆಂದು ಹವಾಮಾನ ಇಲಾಖೆ ತಿಳಿಸಿದೆ.