




ಕಡಬ ಟೈಮ್ಸ್(KADABA TIMES):ಎಸ್.ಎಸ್.ಎಲ್.ಸಿ. ಹಾಗೂ ದ್ವಿತಿಯ ಪಿ.ಯು.ಸಿಯಲ್ಲಿ ೨೦೨೧-೨೨ನೇ ಸಾಲಿನಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯರ ವಿದ್ಯಾರ್ಥಿಗಳಿಗೆ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರೋತ್ಸಾಹ ಧನ ವಿತರಿಸಿದೆ.
ಜು.13ರಂದು ಕುಟ್ರುಪಾಡಿ ಉ.ಹಿ.ಪ್ರಾ.ಶಾಲೆಯ ವಠಾರದಲ್ಲಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಪುತ್ತಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ವಿತರಿಸಲಾಗಿದೆ.

ಎಸ್.ಎಸ್.ಎಲ್.ಸಿ.ಯಲ್ಲಿ ಮೇಘಾ.ಎ(೬೧೨), ಅನ್ವಿತ್ ಶೆಟ್ಟಿ, ದ್ವಿತಿಯ ಪಿಯುಸಿ ಕಲಾ ವಿಭಾಗದಲ್ಲಿ ಚೈತನ್ಯ(೫೩೫), ವಾಣಿಜ್ಯ ವಿಭಾಗದಲ್ಲಿ ಆರ್ಯ ಎನ್.ವರ್ಗೀಸ್, ಕ್ಷಮಾ, ವಿಜ್ಞಾನ ವಿಭಾಗದಲ್ಲಿ ಮೆಲ್ವಿನ್ ಆನ್ಸಿ ವಿಲ್ಸನ್, ದೀಪಕ್ ಗೌಡ ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.