ಮಾಧ್ಯಮದವರು ಸಮಸ್ಯೆಯನ್ನು ಮಾತ್ರ ಬರೆಯುತ್ತಾರೆ,ಆದ ಕೆಲಸವನ್ನೂ ಬರೆಯಲಿ-ಸಚಿವ ಎಸ್.ಅಂಗಾರ ಗರಂ

ಮಾಧ್ಯಮದವರು ಸಮಸ್ಯೆಯನ್ನು ಮಾತ್ರ ಬರೆಯುತ್ತಾರೆ,ಆದ ಕೆಲಸವನ್ನೂ ಬರೆಯಲಿ-ಸಚಿವ ಎಸ್.ಅಂಗಾರ ಗರಂ

Kadaba Times News

ಕಡಬ ಟೈಮ್ಸ್(KADABA TIMES):ಸುಬ್ರಹ್ಮಣ್ಯ: ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಕಾರ್ಯ ನಿರ್ವಹಿಸಲಾಗುತ್ತಿದೆ. ಅಪಪ್ರಚಾರ ಮಾಡುವವರು ಇದ್ದಾರೆ. ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಅವರು ನಿನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕೆಲವೊಮ್ಮೆ ಮಾಧ್ಯಮದವರೂ ಬರೆಯುತ್ತಾರೆ, ಅವರು ಯಾವುದನ್ನು ಬರೆಯಬೇಕೋ ಅದನ್ನು ಬರೆಯುವುದಿಲ್ಲ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ವ್ಯಂಗ್ಯವಾಡಿದರು.

ಕೆಲವೊಮ್ಮೆ ಆದ ಕೆಲಸವನ್ನು ಬರೆಯದೆ ಬಿಟ್ಟು ಬಿಡುತ್ತಾರೆ.  ಮಾಧ್ಯಮದವರು ಮತ್ತು ಇತರರು ವಾಟ್ಸಪ್‌ನಲ್ಲಿ ಸಮಸ್ಯೆಗಳ ಬಗ್ಗೆ ಮಾತ್ರವೇ ಬರೆಯುತ್ತಾರೆ. ಆದ ಕೆಲಸಗಳ ಬಗ್ಗೆ ತಿಳಿಸುವ ಕೆಲಸ ಮಾಡುತ್ತಿಲ್ಲ ಎಂದು ಮಾಧ್ಯಮಗಳ ಮೇಲೆಯೇ ಗರಂ ಆದರು. ಈ ಸಂದರ್ಭ ಶೀಘ್ರ ಸೇತುವೆ ನಿರ್ಮಾಣ ಮಾಡುವ ಭರವಸೆ ನೀಡಿದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top