




ಕಡಬ ಟೈಮ್ಸ್(KADABA TIMES):ಕಡಬ: ಶಾಲಾ ವಿದ್ಯಾರ್ಥಿಯೋರ್ವರಿಗೆ ಬೈಕ್ ಡಿಕ್ಕಿ ಹೊಡೆದ ಘಟನೆ ಕಾಣಿಯೂರಿನಲ್ಲಿ ಜು 15ರಂದು ನಡೆದಿದೆ.
ಚಿರಾಗ್ ಎಂಬ ವಿದ್ಯಾರ್ಥಿ ರಿಕ್ಷಾದಿಂದ ಇಳಿದು ಶಾಲೆಗೆ ತೆರಳಲು ರಸ್ತೆ ದಾಟುವಾಗ ಪುಣ್ಚತ್ತಾರು ಕಡೆಯಿಂದ ಕಾಣಿಯೂರು ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿರಿ:ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿ: ಚಾಲಕ ಅಪಾಯದಿಂದ ಪಾರು
ಘಟನೆಯಿಂದ ವಿದ್ಯಾರ್ಥಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.