ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿ: ಚಾಲಕ ಅಪಾಯದಿಂದ ಪಾರು

ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿ: ಚಾಲಕ ಅಪಾಯದಿಂದ ಪಾರು

Kadaba Times News

ಕಡಬ ಟೈಮ್ಸ್(KADABA TIMES):ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಪುತ್ತೂರಿನ ಬೈಪಾಸ್ ರಸ್ತೆಯ ಉರ್ಲಾಂಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜುಲೈ 14ರಂದು ರಾತ್ರಿ ನಡೆದಿದೆ.

ಶುಂಠಿಕೊಪ್ಪದ ಚಂಗಪ್ಪ ಎಂಬವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ಶ್ರೀ ಶರವು ಗಣೇಶ್ ಆ್ಯಂಬುಲೆನ್ಸ್ ನಲ್ಲಿ ಶುಂಠಿಕೊಪ್ಪಕ್ಕೆ ಕೊಂಡೊಯ್ಯುವಾಗ ಘಟನೆ ಸಂಭವಿಸಿದೆ.

ಈ ಸುದ್ದಿಯನ್ನೂ ಓದಿರಿ:ಕಾಣಿಯೂರಿನ ಬೈತಡ್ಕ ಮಸೀದಿ ಬಳಿ ಅಪರಿಚಿತ ವ್ಯಕ್ತಿಯ ಓಡಾಟ

ಘಟನೆಯಲ್ಲಿ ಆ್ಯಂಬುಲೆನ್ಸ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಮೃತರ ಪತ್ನಿ ಲಲಿತಾ ಹಾಗೂ ಇನ್ನೋರ್ವ ಮಹಿಳೆ ಇನ್ನೊಂದು ವಾಹನದಲ್ಲಿ ಹಿಂಬಾಲಿಸುತ್ತಿದ್ದರು. ಮಂಗಳೂರಿನಿಂದ ಆ್ಯಂಬುಲೆನ್ಸ್ ಉರ್ಲಾಂಡಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ, ಹೆದ್ದಾರಿ ಬದಿಯ ಕಬ್ಬಿಣದ ತಡೆಗೋಡೆಗೆ ಢಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ರಸ್ತೆ ಬದಿ ಪಲ್ಟಿಯಾಗಿದೆ.

ಈ ಸುದ್ದಿಯನ್ನೂ ಓದಿರಿ:ಭೂಕುಸಿತ ಹಿನ್ನೆಲೆ: ಗುಂಡ್ಯದಿಂದ ಆಲೂರುವರೆಗೆ ವಾಹನ ಸಂಚಾರ ನಿರ್ಬಂಧ

ಬಳಿಕ ಆದರ್ಶ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಮೃತದೇಹವನ್ನು ಶುಂಠಿಕೊಪ್ಪಕ್ಕೆ ಕೊಂಡೊಯ್ಯಲಾಯಿತು. ಪುತ್ತೂರು ನಗರ ಪೊಲೀಸ್ ಠಾಣೆಯ ಪಿಎಸ್ ಐ ರಾಜೇಶ್ ಕೆ.ವಿ., ಸಿಬ್ಬಂದಿಗಳಾದ ಸ್ಕರಿಯ, ಸತೀಶ್, ನವೀನ್, ಉದಯ, ಸಂತೋಷ್, ಬಸವರಾಜ್ ಅವರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top