ಕಡಬ: ಹಳೆಸ್ಟೇಷನ್ ಸಮೀಪ ಕೆರೆಯಲ್ಲಿ ತುಂಬಿದ ನೀರು :ರಸ್ತೆಯಂಚಿಗೆ ನೀರು ನುಗ್ಗಿ ಮುಳುಗಡೆ ಭೀತಿ

ಕಡಬ: ಹಳೆಸ್ಟೇಷನ್ ಸಮೀಪ ಕೆರೆಯಲ್ಲಿ ತುಂಬಿದ ನೀರು :ರಸ್ತೆಯಂಚಿಗೆ ನೀರು ನುಗ್ಗಿ ಮುಳುಗಡೆ ಭೀತಿ

Kadaba Times News

ಕಡಬ ಟೈಮ್ಸ್(KADABA TIMES):ಕಡಬ: ಕುಟ್ರುಪಾಡಿ ಗ್ರಾ.ಪಂ  ವ್ಯಾಪ್ತಿಯ ಹಳೆಸ್ಟೇಷನ್  ಕೆರೆಕ್ಕೋಡಿ ಕೆರೆಯಲ್ಲಿ ನೀರು ತುಂಬಿ ರಾಜ್ಯ ರಸ್ತೆಯ ಅಂಚಿಗೆ ತಲುಪಿದೆ.

ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆರೆಯು ಇದೀಗ ತುಂಬಿ ತುಳುಕುತ್ತಿದೆ, ಈ ನೀರಿನಿಂದ  ಸಮೀಪದ ರಸ್ತೆಗಳು ಜಲಾವೃತ್ತವಾಗಿದೆ. ಈ ಕೆರೆಯಿಂದ ನೀರು ಹಳೆಸ್ಟೇಷನ್ ಎಂಬಲ್ಲಿರುವ ಇನ್ನೊಂದು ಕೆರೆಗೆ ಹರಿದು ಅಲ್ಲಿಂದ ಹೆಚ್ಚುವರಿ ನೀರು ಕಡಬ ಬೈಲಿನ ಮೂಲಕ ಹರಿಯುತ್ತಿತ್ತು, ಆದರೆ ಕಳೆದ ಬಾರಿ ಈ ಕೆರೆಯಿಂದ ನೀರು ಹರಿಯುತ್ತಿರುವಲ್ಲಿ ಸಮೀಪದ ಜಮೀನಿನ ವ್ಯಕ್ತಿಯೋರ್ವರು ಮೋರಿ ಅಳವಡಿಸಿ  ಮೇಲ್ಬಾಗಕ್ಕೆ ಮಣ್ಣು ಹಾಕಿರುವುದರಿಂದ ನೀರು ಸರಗಾವಾಗಿ ಹರಿಯಲು ಅಡ್ಡಿಯಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಗ್ರಾ.ಪಂ ಅಧ್ಯಕ್ಷರು,ಪಿಡಿಒ ಭೇಟಿ: ನೀರು ಸರಗಾವಾಗಿ ಹರಿಯಲು ಅಡ್ಡಿಯಾಗಿರುವುದನ್ನು ತಿಳಿದು ಸ್ಥಳಕ್ಕೆ ಗ್ರಾ.ಪಂ.ಅಧ್ಯಕ್ಷ ಮೋಹನ್ ಕೆರೆಕ್ಕೋಡಿ , ಅಭಿವೃದ್ಧಿ ಅಧಿಕಾರಿ ಆನಂದ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ನೀರು ಬ್ಲಾಕ್  ಆಗಲು ಕಾರಣರಾಗಿರುವರಿಗೆ ಎಚ್ಚರಿಕೆ ನೀಡಿ ಸರಿಪಡಿಸುವಂತೆ ಸೂಚಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top