




ಕಡಬ ಟೈಮ್ಸ್(KADABA TIMES):ಹಾಡುಹಗಲೇ ಜನರ ನಡುವೆ ನಡೆದ ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಹುಬ್ಬಳ್ಳಿಯ ಖಾಸಗಿ ಹೋಟೆಲೊಂದರ ರಿಸೆಪ್ಶನ್ ನಲ್ಲಿ ಗುರೂಜಿ ಹತ್ಯೆ ಮಾಡಲಾಗಿದೆ.ಹತ್ಯೆ ನಡೆಸುವ ಮತ್ತು ಆರೋಪಿಗಳು ಪರಾರಿಯಾಗುವ ದೃಶ್ಯಗಳು ಹೋಟೆಲ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗುರೂಜಿ ಬಳಿ ಬಂದ ದುಷ್ಕರ್ಮಿಗಳಲ್ಲಿ ಓರ್ವ ಗುರೂಜಿ ಕಾಲಿಗೆರಗಿ ನಮಸ್ಕಾರ ಮಾಡಿದ್ದಾನೆ. ಗುರೂಜಿ ಆತನ ಮೈದಡವುತ್ತಿದ್ದಂತೆ ಬಳಿಯೇ ನಿಂತಿದ್ದ ಮತ್ತೋರ್ವ ಚಾಕು ತೆಗೆದು ಚುಚ್ಚಲಾರಂಭಿಸಿದ್ದಾನೆ.

ಇಬ್ಬರು ಚಾಕುವಿನಿಂದ ಮನಬಂದಂತೆ ಮುಖ, ಎದೆಗೆ ಸುಮಾರು 50ಕ್ಕೂ ಹೆಚ್ಚು ಬಾರಿ ಇರಿದು ಕೊಲೆಗೈದಿದ್ದಾರೆ. ತಡೆಯಲು ಬಂದ ಒಂದಿಬ್ಬಿಗೆ ದುಷ್ಕರ್ಮಿಗಳು ಚಾಕು ತೋರಿಸಿ ಹೆದರಿಸಿದ್ದಾರೆ.
ಸ್ವಾಮೀಜಿ ನೆಲಕ್ಕೆ ಉರುಳಿ, ಅತೀಯಾದ ರಕ್ತಸ್ರಾವವಾಗಿ ಅಸ್ವಸ್ಥರಾಗಿ ಬಿದ್ದಾಗ ದುಷ್ಕರ್ಮಿಗಳು ಅಲ್ಲಿಂದ ನಡೆದುಕೊಂಡು ಆರಾಮವಾಗಿ ತೆರಳಿದ್ದಾರೆ. ಈ ದೃಶ್ಯಗಳೆಲ್ಲ ಸಿಸಿಟಿವಿಯಲ್ಲಿ ಸೆರೆಯಾಗಿವೆ.ಚಂದ್ರಶೇಖರ ಗುರೂಜಿ ಪ್ರತಿ ಮಂಗಳವಾರ ಹೋಟೆಲ್ ಗೆ ಭೇಟಿ ಕೊಟ್ಟು ಭಕ್ತರಿಗೆ ವಾಸ್ತು ಕುರಿತು ಹೇಳಿಕೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.