




ಕಡಬ ಟೈಮ್ಸ್(KADABA TIMES):ಕಡಬ: ಸರಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ತಾಲೂಕು ಕಛೇರಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ಕಛೇರಿಯ ಎದುರು ಪುರುಷರು, ಮಹಿಳೆಯರು ಅರ್ಜಿ ಹಿಡಿದುಕೊಂಡು ನಿಂತಿದ್ದು ಜನಜಂಗುಳಿ ಕಂಡು ಬಂತು.ಸುರಿವ ಮಳೆಯ ನಡುವೆ ಕಚೇರಿ ಹೊರ ಭಾಗದಲ್ಲೂ ಸಾರ್ವಜನಿಕರು ನಿಂತಿದ್ದರು.

ಜಿಲ್ಲಾಧಿಕಾರಿಯವರು ತಹಸೀಲ್ದಾರ್ ಕಛೇರಿಯ ಒಳಗಡೆ ಜನರ ಸಮಸ್ಯೆ ಆಲಿಸಿ ಪರಿಹಾರ ನೀಡುತ್ತಿದ್ದಾರೆ. ಇಂತಹ ಜನೋಪಕಾರಿ ಕಾರ್ಯಕ್ರಮವನ್ನು ಸಭಾಭವನ ಅಥವಾ ವಿಶಾಲ ಕೊಠಡಿಯಲ್ಲಿ ಮಾಡಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು ಎಂಬ ಮಾತುಗಳು ಕೇಳಿ ಬಂದಿದೆ.
ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.