ಒಂಭತ್ತು ತಿಂಗಳ ಮಗುವಿನೊಂದಿಗೆ ಯುವತಿ ನಾಪತ್ತೆ:ಠಾಣೆಯಲ್ಲಿ ಪ್ರಕರಣ ದಾಖಲು

ಒಂಭತ್ತು ತಿಂಗಳ ಮಗುವಿನೊಂದಿಗೆ ಯುವತಿ ನಾಪತ್ತೆ:ಠಾಣೆಯಲ್ಲಿ ಪ್ರಕರಣ ದಾಖಲು

Kadaba Times News

ಕಡಬ ಟೈಮ್ಸ್(KADABA TIMES):ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ  ಯುವತಿಯೋರ್ವರು ತನ್ನ 9 ತಿಂಗಳ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ  ಬೆಳ್ತಂಗಡಿಯ ಉಜಿರೆಯಲ್ಲಿ ಜು.3 ರಂದು ನಡೆದಿದೆ.

ಉಜಿರೆಯ ನಿನ್ನಿಕಲ್ಲು ನಿವಾಸಿ ಪ್ರಜೀತ(27ವ) ಹಾಗೂ ಅವರ ಪುತ್ರ ಸುಮಂತ್(9 ತಿಂಗಳು) ನಾಪತ್ತೆಯಾದವರು .

ಈ ಸುದ್ದಿಯನ್ನೂ ಓದಿ:ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿ: ಬಲ್ಯದ ಸರ್ಕಾರಿ ಶಾಲೆ ರಸ್ತೆ ಬದಿಯಲ್ಲೇ ಸ್ಥಳೀಯ ವ್ಯಕ್ತಿಯಿಂದ ತೆಡೆಗೋಡೆ ನಿರ್ಮಾಣ:ಶಾಲಾಭಿಮಾನಿಗಳಿಂದ ಆಕ್ರೋಶ

ಪ್ರಜೀತ ಅವರ ಪತಿ ರಿಕ್ಷಾ ಚಾಲಕರಾಗಿದ್ದು ಕೆಲಸಕ್ಕೆ ಹೋಗಿದ್ದರು. ನಂತರ ಅವರ ತಾಯಿ ಹುಲ್ಲಿಗೆಂದು ತೋಟಕ್ಕೆ ಹೋಗಿದ್ದಾಗ  ಪ್ರಜೀತ ತನ್ನ 9 ತಿಂಗಳ ಮಗನೊಂದಿಗೆ ಯಾರಿಗೂ ಹೇಳದೆ ಮನೆಯಿಂದ ಹೋದವರು  ಇದುವರೆಗೆ ವಾಪಾಸು ಮನೆಗೂ ಬಾರದೆ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top