




ಕಡಬ ಟೈಮ್ಸ್(KADABA TIMES):ಕುಟ್ರುಪ್ಪಾಡಿ: ಇಲ್ಲಿನ ಬಲ್ಯ ಗ್ರಾಮದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯ ಪ್ರಮುಖ ಸಂಪರ್ಕ ರಸ್ತೆಯ ಬದಿಯಲ್ಲೇ ಸ್ಥಳೀಯ ವ್ಯಕ್ತಿಯೊಬ್ಬರು ಕಾಂಪೌಂಡ್ ನಿರ್ಮಿಸಲು ಮುಂದಾದ ಕಾರಣ ರಸ್ತೆ ಕಿರಿದಾಗಿ ಸಂಚಾರಕ್ಕೆ ತೊಡಕು ಉಂಟಾಗಿದೆ.
ಈ ಸುದ್ದಿಯನ್ನೂ ಓದಿರಿ:ಮಾತಿನ ಚಕಮಕಿ ನಡೆದು ಕತ್ತಿಯಿಂದ ಕಡಿದ ಸ್ನೇಹಿತರು:ಮಧ್ಯರಾತ್ರಿ ನಡೆಯಿತು ಕೊಲೆ
ಶಾಲಾಭಿಮಾನಿಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಸುಮಾರು30 ವರ್ಷಗಳ ಹಿಂದೆ ‘ಆಳುಕಾಳು’ ಯೋಜನೆಯಡಿಯಲ್ಲಿ ಕಡಬ ಮಂಡಲ ಪಂಚಾಯತ್ ಅಸ್ತಿತ್ವವಿದ್ದಾಗ ಸುಮಾರು 16 ಅಡಿ ರಸ್ತೆ ನಿರ್ಮಿಸಲಾಗಿತ್ತು.

ಇದೀಗ ಸ್ಥಳೀಯ ವ್ಯಕ್ತಿಯೊಬ್ಬರು ರಸ್ತೆಯ ಅಂಚಿನಲ್ಲೇ ಕಾಂಪೌಂಡ್ ನಿರ್ಮಿಸಲು ಮುಂದಾಗಿದ್ದು, ರಸ್ತೆಯು ಇನ್ನಷ್ಟು ಕಿರಿದಾಗಲಿದೆ. ಹಲವು ವರ್ಷಗಳಿಂದ ಇದೇ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು, ಮತಪೆಟ್ಟಿಗೆ ಹೊತ್ತು ತರುವ ಬಸ್ಸು, ಸ್ಥಳೀಯರ ಮನೆಗೆ ತೆರಳುವ ಘನ ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗುವ ಪರಿಸ್ಥಿತಿ ಎದುರಾಗುವ ಸಂಭವ ಹೆಚ್ಚಾಗಿದೆ.
ಈ ಸುದ್ದಿಯನ್ನೂ ಓದಿರಿ:ಕಡಬ:ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ
ಈ ಬಗ್ಗೆ ಸ್ಥಳೀಯ ನಿವಾಸಿಗಳು ಕುಟ್ರುಪಾಡಿ ಗ್ರಾಮ ಪಂಚಾಯತ್ ಗೆ ಸಮಸ್ಯೆಯ ಕುರಿತು ಮನವರಿಕೆ ಮಾಡಿದ್ದು,ಸ್ಥಳಕ್ಕಾಗಮಿಸಿದ ಅಧ್ಯಕ್ಷರ ಸಹಿತ ಅಧಿಕಾರಿ ವರ್ಗ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದ್ದರೂ ಕೇರ್ ಅನ್ನದೆ ಕಾಂಪೌಂಡ್ ನಿರ್ಮಾಣ ಕಾರ್ಯ ಮಾಡುತ್ತಿರುವ ಆರೋಪ ಕೇಳಿಬಂದಿದೆ.ಕೂಡಲೇ ಸಂಬಂಧಪಟ್ಟವರು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವ ಆಗ್ರಹ ವ್ಯಕ್ತವಾಗಿದೆ.