




ಕಡಬ ಟೈಮ್ಸ್(KADABA TIMES):ತಾಯಿಯ ಜತೆ ಅಜ್ಜಿ ಮನೆಗೆ ಹೋಗಿದ್ದ ನಾಲ್ಕು ವರ್ಷದ ಗಂಡು ಮಗು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಧಾರುಣ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಐವರ್ನಾಡು ಎಂಬಲ್ಲಿ ಇಂದು ( ಜು.2) ನಡೆದಿದೆ.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಗಟ್ಟಮನೆ ನಿವಾಸಿ ಆಲಿ ಎಂಬವರ ಪುತ್ರ ಅದಿಲ್ (4) ಮೃತ ಮಗು.

ಆಲಿಯವರ ಪತ್ನಿ ಅಪ್ಸರರವರ ತವರು ಮನೆ ಐವರ್ನಾಡು. ಆಕೆ ಐವರ್ನಾಡಿನ ಆದಂ ಎಂಬವರ ಮಗಳು ಎಂದು ತಿಳಿದು ಬಂದಿದೆ.
ಅಪ್ಸರವರು ತನ್ನ ಮಗನ ಜತೆ ತವರು ಮನೆಗೆ ಹೋಗಿದ್ದರು . ಅಲ್ಲಿ ಆಟವಾಡುತ್ತಿದ್ದ ಮಗು ಪ್ರಿಡ್ಜ್ ನ ಬಾಗಿಲಿಗೆ ಕೈ ಹಾಕಿರುವುದ್ದಾಗಿಯೂ , ಆಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದೆ ಎನ್ನಲಾಗಿದೆ.