




ಕಡಬ ಟೈಮ್ಸ್(KADABA TIMES):ಸುಬ್ರಹ್ಮಣ್ಯ: ಪುತ್ತೂರಿನ ಆರ್.ಟಿ.ಒ. ಅಧಿಕಾರಿಗಳು ಸುಬ್ರಹ್ಮಣ್ಯದಲ್ಲಿ ಕಾರ್ಯಾಚರಣೆ ನಡೆಸಿ 20ಕ್ಕೂ ಹೆಚ್ಚು ವೈಟ್ ಬೋರ್ಡ್ ಟ್ಯಾಕ್ಸಿಗಳ ಮೇಲೆ ದಂಡ ವಿಧಿಸಿದ್ದಾರೆ.
ಕಾನೂನಿನಂತೆ ವೈಟ್ ಬೋರ್ಡ್ ವಾಹನಗಳು ಬಾಡಿಗೆಗೆ ತೆರಳುವಂತಿಲ್ಲ. ಆದರೆ ಸುಬ್ರಹ್ಮಣ್ಯಕ್ಕೆ ಬರುವ, ಸುಬ್ರಹ್ಮಣ್ಯದಿಂದ ಹೋಗುವ ಹಲವಾರು ವೈಟ್ ಬೋರ್ಡ್ ವಾಹನಗಳು ಬಾಡಿಗೆ ನೆಲೆಯಲ್ಲಿ ಸಂಚರಿಸುತ್ತವೆ. ಇದು ಕಾನೂನಿಗೆ ವಿರುದ್ಧವಾಗಿದೆ.

ಈ ಬಗ್ಗೆ ಮಾಹಿತಿ ಅರಿತ ಅಧಿಕಾರಿಗಳು ಬಾಡಿಗೆ ನೆಲೆಯಲ್ಲಿ ಬಂದ ವೈಟ್ ಬೋರ್ಡ್ ವಾಹನಗಳಿಗೆ ದಂಡ ವಿಧಿಸಿ ಬಾಡಿಗೆ ಮಾಡದಂತೆ ತಾಕೀತು ಮಾಡಿದ್ದಾರೆ.
ಸುಬ್ರಹ್ಮಣ್ಯಕ್ಕೆ ದೂರದ ಊರಿನಿಂದ ಬಂದವರಿದ್ದ ಕಾರಣ ವಾಹನ ವಶಕ್ಕೆ ಪಡೆದಿಲ್ಲವಾದರೂ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಕಾರ್ಯಾಚರಣೆ ನಡೆಸಿ ವೈಟ್ ಬೋರ್ಡ್ ವಾಹನಗಳನ್ನು ವಶಕ್ಕೆ ಪಡೆಯುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.