




ಕಡಬ ಟೈಮ್ಸ್(KADABA TIMES):ಕಡಬ: ಮರ ಕಡಿದು ಅಕ್ರಮ ಸಾಗಾಟ ಮಾಡಿರುವ ಆರೋಪದಲ್ಲಿ ವಾಹನ ಹಾಗೂ ವ್ಯಕ್ತಿಯನ್ನು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಶನಿವಾರ ಐತ್ತೂರಿನಲ್ಲಿ ನಡೆದಿದೆ.
ಐತ್ತೂರು ಗ್ರಾಮದ ನೆಟ್ಟಣಬೈಲು ನಿತಿನ್ ಆರೋಪಿ. ಮಾವು ಹಾಗೂ ಹಲಸಿನ ಮರಗಳನ್ನು ಅನುಮತಿ ರಹಿತವಾಗಿ ಕಡಿದು ಲಾರಿಯಲ್ಲಿ ಸಾಗಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮರಗಳನ್ನು ಸರಕಾರಿ ಜಾಗದಿಂದ ಕಡಿಯಲಾಗಿದೆ ಎಂದು ತಿಳಿದುಬಂದಿದೆ. ಆದರೆ ಅಕ್ರಮ-ಸಕ್ರಮ ಭೂಮಿಯಿಂದ ಕಡಿದಿರುವುದಾಗಿ ಆರೋಪಿ ತಿಳಿಸಿರುವುದಾಗಿ ಮಾಹಿತಿ ಲಭಿಸಿದೆ.
ಈ ಬಗ್ಗೆ ದಾಖಲೆ ಸಲ್ಲಿಸಲು ಅಧಿಕಾರಿಗಳು ತಿಳಿಸಿರುವುದಾಗಿ ತಿಳಿದು ಬಂದಿದೆ. ಅರಣ್ಯಾಧಿಕಾರಿಗಳು ಆರೋಪಿ ಹಾಗೂ ಲಾರಿಯನ್ನು ವಶಕ್ಕೆ ಪಡೆದು ಬಳಿಕ ಆರೋಪಿಯನ್ನು ಬಿಡುಗಡೆ ಮಾಡಿದ್ದಾರೆ.