




ಕಡಬ ಟೈಮ್ಸ್(KADABA TIMES):ಸುಳ್ಯದ ಗುಳಿಕ್ಕಾನ ಪ್ರದೇಶ ಜನ ವಾಸಿಸಲು ಯೊಗ್ಯವಾಗಿದೆಯೇ ಎಂದು ತಿಳಿಯಲು ಅದ್ಯಯನ ತಂಡ ಆಗಮಿಸಿ ಪರಿಶೀಲನೆ ನಡೆಸಿ ಅದ್ಯಯನ ವರದಿ ಸರ್ಕಾರಕ್ಕೆ ಸಲ್ಲಿಸಲಿದೆ.
2018 ರಲ್ಲಿ ಗುಳಿಕ್ಕಾನದ ಗುಡ್ಡದಲ್ಲಿ 200 ಮೀಟರ್ ಗೂ ಮಿಕ್ಕಿ ದೂರ ಭೂಮಿ ಆಳವಾಗಿ ಭಾಗ ಬಿಟ್ಟಿತು. ಈ ಸಂದರ್ಭ ಮಡಿಕೇರಿ ಭಾಗದಲ್ಲೂ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿತ್ತು. ಆ ಸಂದರ್ಭ ಗುಳಿಕ್ಕಾನದ ಗುಡ್ಡ ಭಾಗದಲ್ಲಿ 10 ಕುಟುಂಬಗಳು ವಾಸಿಸುತ್ತಿದ್ದವು.

ಅಲ್ಲಿರುವ ಕುಟುಂಬದವನ್ನು ಬೇರೆ ಕಡೆ ಸ್ಥಳಾಂತರಿಸಲು ಪ್ರಕ್ರಿಯೆ ಆರಂಭವಾಗಿ ನಾಲ್ಕು ವರ್ಷಗಳಾದರೂ ಅದು ಈ ವರೆಗೆ ಸಾದ್ಯವಾಗಿಲ್ಲ. ಈಗಲೂ 9 ಮನೆಯವರು ಅಲ್ಲಿ ವಾಸವಿದ್ದು ಆ ಹಿನ್ನೆಲೆಯಲ್ಲಿ ತಂಡದಲ್ಲಿ ಜಿಯಾಲಾಜಿಕಲ್ ಸರ್ವಿಸ್ ಆಪ್ ಇಂಡಿಯಾ ಮಿನಿಸ್ಟರಿ ಮೈನ್ಸ್ ಆಪ್ ಇಂಡಿಯಾದ ಹಿರಿಯ ಜಿಯಾಲಾಜಿಸ್ಟ್ ಅಫೀಸರ್ ಐಜಾದ್ ಅಹಮದ್ ಭಟ್, ಹಿರಿಯ ಜಿಯಾಲಾಜಿಸ್ಟ್ ಜಿ ಎಸ್ ಐ ಸೆಂಥಿಲ್ ಕುಮಾರ್ ಸುಕೋಚ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಂಗಳೂರು ಉಪ ನಿರ್ದೇಶಕ ಲಿಂಗರಾಜ್ ಬಿ ಎಂ ಹಾಗೂ ಭೂ ವಿಜ್ಞಾನಿ ಶ್ರೀಮತಿ ಡಾ।ಸುಷ್ಮಾಶಶಿ ಇದ್ದರು. ಉಪ ತಹಶಿಲ್ದಾರ್ ಚಂದ್ರಕಾಂತ್ ಎಂ ಆರ್, ಆರ್ ಐ ಶಂಕರ್, ಕೊಲ್ಲಮೊಗ್ರು ಗ್ರಾ.ಪಂ ಪಿಡಿಒ ರವಿಚಂದ್ರ, ಕೊಲ್ಲಮೊಗ್ರು ಗ್ರಾಮ ಲೆಕ್ಕಾಧಿಕಾರಿ ಮಧು ಕೆ ಬಿ, ಸಹಾಯಕ ಯತಿನ್, ಗ್ರಾ.ಪಂ ಸಿಬ್ಬಂದಿ ಸಂತೋಷ್, ಸ್ಥಳೀಯ ಜನ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.