




ಕಡಬ ಟೈಮ್ಸ್(KADABA TIMES):ಕಾಣಿಯೂರು: ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಡಬ ತಾಲೂಕಿನ ಬೆಳಂದೂರು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ ಉಂಟಾಗಿದೆ.
ಅಜಿರಂಗಳ ಗಂಗಮ್ಮ ಪಕೀರ ರವರ ಮನೆಗೆ ಹಾನಿಯಾಗಿರುವುದಾಗಿದೆ.ಮನೆಯ ಹೆಂಚುಗಳು ನೆಲಕ್ಕೆ ಬಿದ್ದಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ ಸದಸ್ಯ ಜಯಂತ ಅಬೀರ ಅವರು ಪಂಚಾಯತ್ ವತಿಯಿಂದ ಮನೆಗೆ ತಾತ್ಕಾಲಿಕವಾಗಿ ಟರ್ಪಾಲ್ ಹಾಕುವ ವ್ಯವಸ್ಥೆಯನ್ನು ಮಾಡಿದರು.

ಈ ಸುದ್ದಿಯನ್ನೂ ಓದಿರಿ:ಶೌಚಾಲಯದಲ್ಲಿ ಕೂಡಿ ಹಾಕಿ ಚಿತ್ರಹಿಂಸೆ: ಪುತ್ರ-ಸೊಸೆಯ ವಿರುದ್ಧ ಪ್ರಕರಣ ದಾಖಲು
ಈ ಕಾರ್ಯದಲ್ಲಿ ಯಶೋಧರ ನಾಯ್ಕ್,ವಾಮನ ರವರು ಸಹಕರಿಸಿದರು.ಸ್ಥಳಕ್ಕೆ ಬೆಳಂದೂರು ಗ್ರಾಮ ಕರಣಿಕರಾದ ಪುಷ್ಪರಾಜ್, ಗ್ರಾಮ ಸಹಾಯಕ ಪ್ರೀತಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಭೇಟಿ ನೀಡಿದ್ದಾರೆ.