ಬಟ್ಟೆ ಅಂಗಡಿಯ ಟ್ರಯಲ್ ರೂಮಿಗೆ ತೆರಳಿದ ಹಿಂದೂ ಯುವತಿಯ ದೃಶ್ಯ ಸೆರೆ ಹಿಡಿದ ಯುವಕ: ಹಿಂದೂ ಪರ ಸಂಘಟನೆಗಳಿಂದ ಖಂಡನೆ

ಬಟ್ಟೆ ಅಂಗಡಿಯ ಟ್ರಯಲ್ ರೂಮಿಗೆ ತೆರಳಿದ ಹಿಂದೂ ಯುವತಿಯ ದೃಶ್ಯ ಸೆರೆ ಹಿಡಿದ ಯುವಕ: ಹಿಂದೂ ಪರ ಸಂಘಟನೆಗಳಿಂದ ಖಂಡನೆ

Kadaba Times News

ಕಡಬ ಟೈಮ್ಸ್(KADABA TIMES):ಸ್ಪೋರ್ಟ್ಸ್ ಬಟ್ಟೆ ಖರೀದಿಸಿ ಡ್ರೆಸ್ಸಿನ ಅಳತೆ ನೋಡಲು ಟ್ರಯಲ್ ರೂಮಿಗೆ ತೆರಳಿದ ಯುವತಿಯೋರ್ವಳು ಬಟ್ಟೆ  ಬದಲಾಯಿಸುವ ದೃಶ್ಯವನ್ನು ತನ್ನ ಕ್ಯಾಮರದಲ್ಲಿ ಸೆರೆ ಹಿಡಿಯಲೆತ್ನಿಸಿದ ಅಂಗಡಿ ನೌಕರನೋರ್ವನ‌ ವಿರುದ್ಧ ಫೋಕ್ಸೊ ಪ್ರಕರಣ ದಾಖಲಿಸಲಾಗಿದೆ.

ಕುಂಬಳೆಯ ಬಂದ್ಯೊಡು ಪೇಟೆಯ ಹೃದಯ ಭಾಗದಲ್ಲಿರುವ ಸ್ಪೋರ್ಟ್ಸ್ ಡ್ರೆಸ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಕುಂಬಳೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ:  ಕುಂಬಳೆಯ ಬಂದ್ಯೊಡು ಪೇಟೆಯ ಹೃದಯ ಭಾಗದಲ್ಲಿರುವ ಸ್ಪೋರ್ಟ್ಸ್ ಡ್ರೆಸ್  ಅಂಗಡಿಯೊಂದಕ್ಕೆ  ಜೆರ್ಸಿ ಖರೀದಿಗೆಂದು ಯುವತಿಯೋರ್ವಳು ತೆರಳಿದ್ದು ಈ ವೇಳೆ ಬಟ್ಟೆ ಖರೀದಿಸಿ ಅಳತೆ ನೋಡುವಂತೆ ಒತ್ತಾಯಿಸಿ ಅನ್ಯ ಕೋಮಿನ ಅಂಗಡಿ ನೌಕರ ರೂಮಿನೊಳಗೆ ಕಳುಹಿಸಿದ್ದ. ಈ ವೇಳೆ ತನ್ನ ಮೊಬೈಲ್ ಇರಿಸಿ ಯುವತಿ ಡ್ರೆಸ್ ಬದಲಾಯಿಸುವ ಚಿತ್ರ ಸೆರೆ ಹಿಡಿಯಲೆತ್ನಿಸಿದ್ದ.

ಇದನ್ನು ಗಮನಿಸಿದ ಯುವತಿ ಈ ಬಗ್ಗೆ ತಗಾದೆ ತೆಗೆದಿದ್ದು ಯುವಕನ ವಿರುದ್ಧ ಕುಂಬಳೆ ಪೋಲಿಸರಿಗೆ ದೂರು ನೀಡಲಾಗಿದೆ.  ಯುವತಿಯರು ಡ್ರೆಸ್ ಬದಲಾಯಿಸುವ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ  ಬಳಸಿಕೊಂಡಿರುವ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪೋಲಿಸರು ನಿಗಾವಹಿಸಿದ್ದಾರೆ.

ಈ ಪ್ರಕರಣವನ್ನು ವಿಶ್ವಹಿಂದು ಪರಿಷತ್ ಸಹಿತ ಬಜರಂಗದಳ ಮಾತೃ ಸಂಘ ,ಭಾಜಪದ ಪ್ರಮುಖರು ತೀವ್ರವಾಗಿ ಖಂಡಿಸಿದ್ದು ಹಿಂದೂ ಯುವತಿಯರು ಅನ್ಯ ಕೋಮಿನ ಅಂಗಡಿಗಳಲ್ಲಿ ಜಾಗೃತರಾಗುವಂತೆ ಕರೆ ನೀಡಿದೆ.

 

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top