




ಕಡಬ ಟೈಮ್ಸ್(KADABA TIMES):ಕಡಬ: ಕಾರೊಂದು ಹೊಳೆಗೆ ಬಿದ್ದಿರುವ ಘಟನೆ ಜು 9ರಂದು ರಾತ್ರಿ ಕಾಣಿಯೂರು ಬೈತಡ್ಕದಲ್ಲಿ ನಡೆದಿದೆ ಎನ್ನಲಾಗಿದ್ದು ಕಾರು ಹೊಳೆಗೆ ಬಿದ್ದ ದೃಶ್ಯ ಮಸೀದಿಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪುತ್ತೂರು ಕಡೆಯಿಂದ ಕಾಣಿಯೂರು ಕಡೆಗೆ ಬರುತ್ತಿದ್ದ ಕಾರು ಸೇತುವೆಗೆ ತಡೆ ಬೆಲಿಗೆ ಡಿಕ್ಕಿ ಹೊಡೆದು ಹೊಳೆಗೆ ಬೀಳುವ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಸುದ್ದಿಯನ್ನೂ ಓದಿರಿ:ಬಳ್ಪ ಬಿ ಜೆ ಪಿ ಗ್ರಾಮ ಸಮಿತಿಯಿಂದ ಪತ್ರಿಕಾಗೋಷ್ಟಿ: ಭೋಗಾಯನ ಕೆರೆಯ ತಡೆಗೋಡೆಯ ಕಲ್ಲು ಕುಸಿತವಾಗಿರುವುದು ಕಳಪೆ ಕಾಮಗಾರಿಯಿಂದ ಅಲ್ಲ!

ತಡೆ ಬೇಲಿಯಲ್ಲಿ ಕಾರು ಡಿಕ್ಕಿಯಾಗಿರುವ ಕುರುಹು ಇದೆ ಎಂದು ಅಲ್ಲಿ ನೆರೆದವರು ತಿಳಿಸಿದ್ದಾರೆ.ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.