ಸುಬ್ರಹ್ಮಣ್ಯ:ಮುರಿದು ಬಿದ್ದ ಕೊಟ್ಟಿಗೆಯ ಛಾವಣಿ :ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ದುರಸ್ತಿ

ಸುಬ್ರಹ್ಮಣ್ಯ:ಮುರಿದು ಬಿದ್ದ ಕೊಟ್ಟಿಗೆಯ ಛಾವಣಿ :ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ದುರಸ್ತಿ

Kadaba Times News

ಕಡಬ ಟೈಮ್ಸ್(KADABA TIMES):ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮದ ವೇದಾವತಿ ತೋಟದಮಜಲು ಎಂಬುವವರ ಕೊಟ್ಟಿಗೆಯ ಛಾವಣಿ ಜು.06 ರಂದು ಸುರಿದ ಭಾರೀ ಮಳೆಗೆ ಮುರಿದಿದ್ದು ಶೌರ್ಯ ವಿಪತ್ತು ನಿರ್ವಹಣಾ ಘಟಕದವರು ಮಾಡು ರಿಪೇರಿ ಮಾಡಿಕೊಟ್ಟು ಮಾನವೀಯ ನೆರವು ನೀಡಿದ್ದಾರೆ.

ಮನೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವಾ ಪ್ರತಿನಿಧಿ ಮುಖಾಂತರ ವಿಪತ್ತು ನಿರ್ವಹಣಾ ಘಟಕಕ್ಕೆ ಮಾಹಿತಿ ನೀಡಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಜು.8 ರಂದು ಮುರಿದು ಹೋಗಿದ್ದ ಕೊಟ್ಟಿಗೆಯ ಛಾವಣಿಯನ್ನು ಸರಿಪಡಿಸಿ ಪ್ಲಾಸ್ಟಿಕ್ ಹೊದಿಸಿ ದುರಸ್ತಿಪಡಿಸಿದರು.

ಈ ಸುದ್ದಿಯನ್ನೂ ಓದಿರಿ:ಕಡಬ:ರಾತ್ರಿ ವೇಳೆ ಹೊಳೆಗೆ ಬಿದ್ದ ಕಾರು: ಸಿ.ಸಿ ಕ್ಯಾಮೆರಾದಲ್ಲಿ ಸೆರೆ

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್.ಟಿ.ಎನ್ , ಸದಸ್ಯರುಗಳಾದ ಕುಶಾಲಪ್ಪ ಜಾಲುಮನೆ, ಅಶೋಕ ಮಿತ್ತೋಡಿ, ಮುತ್ತಪ್ಪ ಕಟ್ಟ, ಚಂದ್ರಶೇಖರ ಕೋನಡ್ಕ, ಜಯಮಾಲಾ ತಂಬಿನಡ್ಕ, ಲೀಲಾವತಿ ತಂಬಿನಡ್ಕ ಮತ್ತಿತರರು ಉಪಸ್ಥಿತರಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top