




ಕಡಬ ಟೈಮ್ಸ್(KADABA TIMES):ಕಡಬ: ನಿನ್ನೆ ರಾತ್ರಿ ಎಡೆಬಿಡದೆ ಸುರಿದ ಭಾರೀ ಮಳೆಗೆ ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ನದಿ ನೀರು ರಸ್ತೆಗೆ ನುಗ್ಗಿದೆ.
ಕಡಬ-ಪಂಜ-ಎಡಮಂಗಲವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಪಕ್ಕದಲ್ಲಿಯೇ ಕುಮಾರಧಾರ ಹೊಳೆ ಹರಿಯುತ್ತಿದೆ.ಮುಖ್ಯವಾಗಿ ಪಂಜವನ್ನು ಸಂಪರ್ಕಿಸುವ ರಸ್ತೆಗೆ ನೀರು ಹರಿದು ಬಂದಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟಾಗುವಂತಾಗಿದೆ.

ಈ ಸುದ್ದಿಯನ್ನೂ ಓದಿರಿ:ಧಾರಾಕಾರ ಮಳೆ: ನದಿಯಲ್ಲಿ ತೇಲಿ ಬಂತು ಅಪರಿಚಿತ ವ್ಯಕ್ತಿಯ ಶವ
ಮಹಾ ಮಳೆಗೆ ಕಡಬ ತಾಲೂಕಿನ ಮೂಲಕ ಹಾದು ಹೋಗುವ ಕುಮಾರಧಾರ,ಗುಂಡ್ಯ ನದಿಗಳು ತುಂಬಿ ಹರಿಯುತ್ತಿದೆ. ಹಳ್ಳ ,ತೋಡುಗಳು ಭರ್ತಿಗೊಂಡು ಮಣ್ಣು ಮಿಶ್ರಿತ ನೀರು ನದಿ ಸೇರುತ್ತಿದೆ.