




ಕಡಬ ಟೈಮ್ಸ್(KADABA TIMES):ಕಡಬ: ಇಲ್ಲಿನ ಕಳಾರದಲ್ಲಿ ವ್ಯಕ್ತಿಯೊಬ್ಬರು ಗದ್ದೆಗೆ ಮಣ್ಣು ಹಾಕಿದ ಕಾರಣ ಮಳೆಗೆ ನೀರು ನಿಂತು ವಿಶಾಲ ಕೆರೆಯಂತಾಗಿದೆ.
ನೀರು ನಿಂತ ಕಾರಣ ಪಕ್ಕದ ಕೃಷಿ ಜಮೀನಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಎಡೆಬಿಡದೆ ಸುರಿದ ಮಳೆಗೆ ಮಣ್ಣು ಹಾಕಿದ ಗದ್ದೆಯ ಪಕ್ಕ ನೀರು ನಿಂತು ಅಪಾಯಕ್ಕೆ ಆಹ್ವಾನ ನೀಡುವಂತಿದ್ದರೂ ಮಣ್ಣು ತೆರವು ಅಥವಾ ಚರಂಡಿ ನಿರ್ಮಾಣ ಮಾಡಿಲ್ಲ.
ಕಳೆದ ವರ್ಷವೇ ಮಹಮ್ಮದ್ ಎಂಬವರು ಈ ಬಗ್ಗೆ ಪಟ್ಟಣ ಪಂಚಾಯತ್ ಗೆ ದೂರು ನೀಡಿದ್ದು ಅಧಿಕಾರಿಗಳು ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ.ವ್ಈಚ್ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ಮಾತಿಗೆ ಬೆಲೆ ಇಲ್ಲದಂತಾಗಿದೆ ಎಂದಿದ್ದಾರೆ.