




ಕಡಬ ಟೈಮ್ಸ್(KADABA TIMES): ಉಕ್ಕಿಹರಿಯುವ ಗೌರಿಹೊಳೆ ಹೊಳೆಗೆ ಮಧ್ಯರಾತ್ರಿ ಭಾರೀ ವೇಗವಾಗಿ ಬಂದು ಬಿದ್ದ ಕಾರು ಪತ್ತೆಯಾಗಿದ್ದು, ಮೂವರು ನೀರುಪಾಲಾಗಿದ್ದಾರೆ ಎಂದು ತಿಳಿದುಬಂದಿದೆ
ಈ ಘಟನೆ ಜ.10 ರಂದು ರಾತ್ರಿ ನಡೆದಿದ್ದು ನೀರು ಪಾಲಾದವರು ಮೂವರು ಕೂಡ ಸುಳ್ಯ ಸಮೀಪದ ಗುತ್ತಿಗಾರಿನವರು ಎಂದು ತಿಳಿದುಬಂದಿದೆ. ಬಿದ್ದ ಸೇತುವೆಯಲ್ಲಿಂದ ನೂರು ಮೀಟರ್ ದೂರದಲ್ಲಿ ಪತ್ತೆಯಾಗಿದೆ.

ಮಂಜೇಶ್ವರ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತ್ತಡ್ಕ ಮಸೀದಿಯ ಸಮೀಪದ ಗೌರಿಹೊಳೆಯಲ್ಲಿ ಮಧ್ಯರಾತ್ರಿ 12 ಗಂಟೆ ಸಮಯಕ್ಕೆ ಅವಘಡ ಸಂಭವಿಸಿದೆ. ಕಾರು ಪುತ್ತೂರಿನಿಂದ ಕಾಣಿಯೂರು ಕಡೆ ಸಂಚರಿಸುತಿತ್ತು. ಅಪಘಾತಗೊಂಡಲ್ಲಿ ಕಾರಿನ ಬೋನೆಟ್ ಒಂದು ಭಾಗ ಸಿಕ್ಕಿದ್ದು, ಅದು ಮಾರುತಿ 800 ಎಂಬುದರದ್ದು ಆಗಿದೆ.
ಅಪಘಾತದ ವೇಗಕ್ಕೆ ಸೇತುವೆಯ ತಡೆಬೇಲಿಯ ಮೂರು ಕಂಬಗಳು ಮುರಿದು ಕಬ್ಬಿಣ ನೇತಾಡುತ್ತಿದೆ.ನೂರಾರೂ ಜನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು . ಇದೀಗ ಕಾರು ಪತ್ತೆಯಾಗಿದೆ ಎನ್ನಲಾಗಿದೆ.