ಬಳ್ಪ ಬಿ ಜೆ ಪಿ ಗ್ರಾಮ ಸಮಿತಿಯಿಂದ ಪತ್ರಿಕಾಗೋಷ್ಟಿ: ಭೋಗಾಯನ ಕೆರೆಯ ತಡೆಗೋಡೆಯ ಕಲ್ಲು ಕುಸಿತವಾಗಿರುವುದು ಕಳಪೆ ಕಾಮಗಾರಿಯಿಂದ ಅಲ್ಲ!

ಬಳ್ಪ ಬಿ ಜೆ ಪಿ ಗ್ರಾಮ ಸಮಿತಿಯಿಂದ ಪತ್ರಿಕಾಗೋಷ್ಟಿ: ಭೋಗಾಯನ ಕೆರೆಯ ತಡೆಗೋಡೆಯ ಕಲ್ಲು ಕುಸಿತವಾಗಿರುವುದು ಕಳಪೆ ಕಾಮಗಾರಿಯಿಂದ ಅಲ್ಲ!

Kadaba Times News

ಕಡಬ ಟೈಮ್ಸ್(KADABA TIMES):ಸುಳ್ಯ ವಿಧಾನ ಸಭಾಕ್ಷೇತ್ರ: ಸಂಸದರ ಆದರ್ಶ ಗ್ರಾಮ   ಬಳ್ಪದ   ಮಣ್ಣಿನ ಒಸರು ಹೆಚ್ಚಾಗಿ ಮಣ್ಣು ಸಮೇತ ಕಲ್ಲು ಕುಸಿದಿದ್ದು ಕಳಪೆ ಕಾಮಗಾರಿ ಆರೋಪ ಸರಿಯಲ್ಲ ಎಂದು ಗ್ರಾಮ ವಿಕಾಸ ಪ್ರತಿಷ್ಠಾನ ಅಧ್ಯಕ್ಷ ವಿನೋದ್ ಬೊಳ್ಮಲೆ ಹೇಳಿದ್ದಾರೆ.

ಬಳ್ಪ ಬಿ ಜೆ ಪಿ ಗ್ರಾಮ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು . ಕಾಮಗಾರಿ ಎಸ್ಟಿಮೇಟ್‌ನಲ್ಲಿರುವಂತೆ ಮಾಡಲಾಗಿದೆ. ಕೆರೆ ಇನ್ನೂ ಲೋಕಾರ್ಪಣೆ ಆಗಿಲ್ಲ. ಕಾಮಗಾರಿಯ ಯಾವುದೇ ಬಿಲ್ ಪಾವತಿಯೂ ಆಗಿಲ್ಲ ಯಾರೂ ವೃಥಾ ಆರೋಪ ಮಾಡಬೇಡಿ ಎಂದರಲ್ಲದೆ   ಕೆರೆಯ ಅಡಿಭಾಗದಲ್ಲಿ ಭೀಮ್‌ಗಳಿದ್ದು ಅಲ್ಲಲ್ಲಿ ೨೮ ಫಿಲ್ಲರ್‌ಗಳಿವೆ.   ಕಳಪೆಯ ಮಾತೇ ಇಲ್ಲ. ೪೦ % ಕಮಿಷನ್ ಆರೋಪ ಹೊರಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಅದನ್ನೇ ಮಾಡಿದ್ದು ಈಗ ಬೇರೆಯವರಿಗೆ ಬೆರಳು ತೋರಿಸುತ್ತಿದೆ ಎಂದರು.

ಈ ಸುದ್ದಿಯನ್ನೂ ಓದಿರಿ:ಬಕ್ರೀದ್ ಹಬ್ಬ ಹಿನ್ನೆಲೆ: ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರಕಾರ

೨ ಕೋಟಿ ಕಾಮಗಾರಿ ವೆಚ್ಚದಲ್ಲಿ ನಡೆಯುವ ಕಾಮಗಾರಿ  ೩೬೫ ಮೀ ಉದ್ದ ಇದೆ.೨೦ ಅಡಿ ಆಳ ಇದೆ. ಕೆರೆ ಮೇಲಿನ ಭಾಗದವರಿಗೆ ಯಾರಿಗೆ ತೊಂದರೆ ಆದರೂ ಅದು ಶಾಶ್ವತ ಅಲ್ಲ, ಹಿಂದೆ ಕಾಂಗ್ರೆಸ್ ಆಡಳಿತದ ವೇಳೆ ೫ ಲಕ್ಷ ವೆಚ್ಚ ಮಾಡಿ ಹೂಳು ತೆಗೆದು ಕೆರೆ ದಂಡೆಯಲ್ಲೆ ಹಾಕಿದ್ದಾರೆ ಅದು ಮತ್ತೆ ಕೆರೆ ಸೇರಿತ್ತು ಎಂದರು.ಪತ್ರಿಕಾಗೋಷ್ಟಿಯಲ್ಲಿ   ಬಿ ಜೆ ಪಿ ಮಂಡಲ ಸಮಿತಿಯ ಪ್ರಮುಖರು ಹಾಜರಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top