




ಕಡಬ ಟೈಮ್ಸ್(KADABA TIMES): ನೆಲ್ಯಾಡಿ ಗ್ರಾಮದ ಎರಡು ಕಡೆಗಳಲ್ಲಿ ಗುಡ್ದ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾದ ಬಗ್ಗೆ ವರದಿಯಾಗಿದೆ.
ಜು.9ರಂದು ರಾತ್ರಿ ಇಚ್ಚೂರು-ಕೊಪ್ಪ ಗ್ರಾ.ಪಂ.ರಸ್ತೆಯ ಕೊಪ್ಪ ಎಂಬಲ್ಲಿ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದಿದೆ. ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾದ ಘಟನೆ ನಡೆದಿದೆ.ನೆಲ್ಯಾಡಿ ಗ್ರಾ.ಪಂ.ಸದಸ್ಯ ಆನಂದ ಗೌಡ ಪಿಲವೂರುರವರ ನೇತೃತ್ವದಲ್ಲಿ ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸಲಾಗಿದೆ.
ಈ ಸುದ್ದಿಯನ್ನೂ ಓದಿರಿ:ಯಮನಂತೆ ಬಂದ ಕಾರು: ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರ ಸಾವು

ಇನ್ನು ಜು.10ರಂದು ಆಲಂಕಾರು-ನೆಲ್ಯಾಡಿ ಪಿಡಬ್ಲ್ಯುಡಿ ರಸ್ತೆಯ ತೋಟ ಚೆಡವು ಎಂಬಲ್ಲಿ ಗುಡ್ಡ ಕುಸಿತಗೊಂಡು ಮಣ್ಣು ರಸ್ತೆಗೆ ಬಿದ್ದಿತ್ತು ಮಣ್ಣು ಬಿದ್ದು ರಸ್ತೆ ಬಂದ್ ಆಗಿರುವ ಬಗ್ಗೆ ನೆಲ್ಯಾಡಿ ಗ್ರಾ.ಪಂ.ಸದಸ್ಯ ಆನಂದ ಗೌಡ ಪಿಲವೂರುರವರು ಲೋಕೋಪಯೋಗಿ ಇಲಾಖೆಯವರ ಗಮನಕ್ಕೆ ತಂದಿದ್ದರು.
ಇಲಾಖೆ ವತಿಯಿಂದ ಗುತ್ತಿಗೆದಾರರ ಮೂಲಕ ಮಣ್ಣು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಗಿದೆ.