




ಕಡಬ ಟೈಮ್ಸ್(KADABA TIMES):ರಸ್ತೆ ಬದಿ ಹೋಗುತ್ತಿದ್ದ ಬೈಕ್‌ನ ಮೇಲೆ ಏಕಾಏಕಿ ಕಾರು ಬಂದು ಬಿದ್ದು, ಸವಾರ ಮೃತಪಟ್ಟ ದುರ್ಘಟನೆ ಉಡುಪಿಯ ರಾಷ್ಟ್ರೀಯ ಹೆದ್ದಾರಿಯ ಕರಾವಳಿ ಜಂಕ್ಷನ್ ಬಳಿ ಸಂಭವಿಸಿದೆ.
ಮೃತನನ್ನು ಬೈಕ್ ಸವಾರ ವಿಜಯಪುರದ ನಿವಾಸಿ ಸುನಿಲ್ (24) ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನೂ ಓದಿರಿ:ಕೋಡಿಂಬಾಳ ಗ್ರಾಮ:ಕೋಲ್ಪೆಯಲ್ಲಿ ಧರೆ ಕುಸಿತ:ಮನೆಗೆ ಹಾನಿಯಾಗುವ ಆತಂಕ

ಬ್ರಹ್ಮಾವರದಿಂದ ಮಂಗಳೂರು ಕಡೆಗೆ ರಾ.ಹೆಯಲ್ಲಿ ಬರುತ್ತಿದ್ದ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಪಕ್ಕದ ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನ ಮೇಲೆ ಬಂದು ಬಿದ್ದಿದೆ.ಪರಿಣಾಮ ಬೈಕ್ ಸವಾರ ಸುನಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಹಸವಾರ ಬಾಗಲಕೋಟೆ ನಿವಾಸಿ ಮಂಜುನಾಥ್ ಗಾಯಗೊಂಡಿದ್ದಾರೆ. ಉಡುಪಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.