




ಕಡಬ ಟೈಮ್ಸ್(KADABA TIMES): ಕಡಬ:ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದಲ್ಲಿ ಮನೆಯೊಂದರ ಸಮೀಪ ಇಳಿಜಾರು ಪ್ರದೇಶ ಕುಸಿತಗೊಂಡ ಘಟನೆ ವರದಿಯಾಗಿದೆ.
ಜುಲೈ ೧೦ ರಂದು ಸುರಿದ ನಿರಂತರ ಮಳೆಗೆ ಸಂಜೆ ವೇಳೆ ಕೋಡಿಂಬಾಳ ಗ್ರಾಮದ ಕೋಲ್ಪೆ ರುಕ್ಮಯ್ಯ ಗೌಡರ ಮನೆ ಅಂಗಳದ ಸಮೀಪ ಕುಸಿತ ಉಂಟಾಗಿರುವುದಾಗಿದೆ.
ಈಸುದ್ದಿಯನ್ನೂಓದಿರಿ:BREAKING NEWS:ಕಡಬ: ಕಾಣಿಯೂರು ಬಳಿ ಹೊಳೆಗೆ ಬಿದ್ದ ಕಾರು ಪತ್ತೆ :ಗುತ್ತಿಗಾರಿನ ಮೂವರು ನೀರುಪಾಲು ಶಂಕೆ

ಇಳಿಜಾರು ಪ್ರದೇಶ ಕುಸಿತ ಉಂಟಾದ ಕಾರಣ ಪಕ್ಕದ ತೋಟಕ್ಕೆ ಮಣ್ಣು ಬಿದ್ದಿದೆ,ಅಲ್ಲದೆ ಮಳೆ ನೀರು ಹರಿದು ಹೋಗುವ ಸಣ್ಣ ಕಂದಕವೂ ಮುಚ್ಚಿದೆ. ನಿರಂತರವಾಗಿ ಮಣ್ಣು ಕುಸಿತವಾದಲ್ಲಿ ಮೇಲ್ಬಾಗದಲ್ಲಿರುವ ಮನೆಗೆ ಹಾನಿಯಾಗುವ ಆತಂಕ ಎದುರುರಾಗಿದೆ.
ಘಟನಾ ಸ್ಥಳಕ್ಕೆ ಪಟ್ಟಣ ಪಂಚಾಯತ್ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆ ಇದೆ.