




ಕಡಬ ಟೈಮ್ಸ್(KADABA TIMES):ಕಡಬ:ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರು ಹೊಳೆಗೆ ಬಿದ್ದು ಇಬ್ಬರು ನಾಪತ್ತೆಯಾಗಿದ್ದು, ಈ ಪೈಕಿ ಓರ್ವ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧನುಷ್ ಅವರ ತಂದೆ ಚೋಮ ನಾಯ್ಕ ಅವರು ವಿಟ್ಲ ಪೊಲೀಸ್ ಠಾಣೆಯಲ್ಲಿ ವಿಟ್ಲ ಮುಡ್ನೂರು ಗ್ರಾಮದ ಶಾಂತಿಯಡ್ಕ ನಿವಾಸಿ ಧನುಷ್ ಎಂಬಾತನು ಜುಲೈ 9 ರಂದು ರಾತ್ರಿ ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಶಾಂತಿಯಡ್ಕ ಎಂಬಲ್ಲಿರುವ ಮನೆಯಿಂದ ಮಾರುತಿ ಕಾರಿನಲ್ಲಿ ವಿಟ್ಲ, ಕಡಂಬು ಕಡೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು. ನಂತರ ಮೊಬೈಲ್ ಕೂಡಾ ಸ್ವಿಚ್‌ಆಫ್‌ಆಗಿದೆ.
ಈ ಸುದ್ದಿಯನ್ನೂ ಓದಿರಿ:BREAKING NEWS:ಕಡಬ: ಕಾಣಿಯೂರು ಬಳಿ ಹೊಳೆಗೆ ಬಿದ್ದ ಕಾರು ಪತ್ತೆ :ಗುತ್ತಿಗಾರಿನ ಮೂವರು ನೀರುಪಾಲು ಶಂಕೆ

ಈವರೆಗೆ ಮಗ ಮನೆಗೆ ಬಂದಿರುವುದಿಲ್ಲ. ನಂತರ ಕಾಣೆಯಾದ ಮಗ ಧನುಷನ ಬಗ್ಗೆ ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದಾಗ ಆತನ ಬಗ್ಗೆ ಯಾವುದೇ ಮಾಹಿತಿ ದೊರೆತಿರುವುದಿಲ್ಲ,ಮನೆಗೂ ಬಾರದೆ, ಸಂಬಂಧಿಕರ ಹಾಗೂ ಗೆಳೆಯರ ಮನೆಗೂ ಹೋಗದೆ ಕಾಣೆಯಾಗಿರುವ ಮಗ ಧನುಷ್ ನನ್ನು ಪತ್ತೆ ಮಾಡಿಕೊಡಬೇಕೆಂದು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿರಿ :ಕಡಬ: ಕಾಣಿಯೂರು ಬಳಿ ನದಿಗೆ ಕಾರು ಉರುಳಿಬಿದ್ದ ಘಟನೆ| ಕಾರನ್ನು ಮೇಲಕ್ಕೆತ್ತಿದ ಅಗ್ನಿಶಾಮಕ ದಳದ ಸಿಬ್ಬಂದಿ