




ಕಡಬ ಟೈಮ್ಸ್(KADABA TIMES):ಯುವತಿಯೋರ್ವರು ನಾಪತ್ತೆಯಾಗಿರುವ ಕುರಿತು ಆಕೆಯ ಅಣ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಬಸಬೆಟ್ಟು ನಿವಾಸಿ ರಝಾಕ್ ರವರ ಪುತ್ರಿ ಕೈರುನ್ನಿಸ(21 ವ.) ರವರು ನಾಪತ್ತೆಯಾದ ಯುವತಿ

ನನ್ನ ತಂಗಿ ಕೈರುನ್ನಿಸರವರು ಜು.22ರಂದು ಸಾಯಂಕಾಲ ಮನೆಯಿಂದ, ಮನೆಯಲ್ಲಿ ಯಾರಿಗೂ ಹೇಳದೆ ಹೊರಟು ಹೋಗಿದ್ದು ಸಂಬಂಧಿಕರ ಮನೆಯ ಸಹಿತ ವಿವಿಧೆಡೆ ಹುಟುಕಾಟ ನಡೆಸಿದರೂ ಈವರೆಗೆ ಆಕೆ ಪತ್ತೆಯಾಗಿಲ್ಲ.ನನ್ನಲ್ಲಿ ಈ ಹಿಂದೆ ನೆಲ್ಲಿಗುಡ್ಡೆಯಲ್ಲಿರುವ ಮುಕ್ವೆ ನಿವಾಸಿ ಸಿದ್ದೀಕ್ ಎಂಬವರು ಕೈರುನ್ನಿಸಾಳನ್ನು ಮದುವೆ ಮಾಡಿಕೊಡಬೇಕಾಗಿ ಕೇಳುತ್ತಿದ್ದರು. ಆದುದರಿಂದ ಆಕೆ ಸಿದ್ದಿಕ್‌ರವರ ಜೊತೆಯಲ್ಲಿ ಹೋಗಿರುವ ಸಂಶಯ ಇರುವುದಾಗಿ ಆಕೆಯ ಅಣ್ಣ ಅಬ್ದುಲ್ ಶರೀಫ್ ರವರು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.