ಫೇಸ್ ಬುಕ್ ಲವ್ ಸ್ಟೋರಿ:ಯುವಕನೆಂದು ನಂಬಿ ಪ್ರೀತಿಸಿ ಮೋಸ ಹೋದ ವಿಟ್ಲದ ಯುವತಿ | ಗಂಡಸಿನ ಧ್ವನಿಯ ಜಾಡು ಹಿಡಿದ ವಕೀಲೆ

ಫೇಸ್ ಬುಕ್ ಲವ್ ಸ್ಟೋರಿ:ಯುವಕನೆಂದು ನಂಬಿ ಪ್ರೀತಿಸಿ ಮೋಸ ಹೋದ ವಿಟ್ಲದ ಯುವತಿ | ಗಂಡಸಿನ ಧ್ವನಿಯ ಜಾಡು ಹಿಡಿದ ವಕೀಲೆ

Kadaba Times News

ಕಡಬ ಟೈಮ್ಸ್(KADABA TIMES):ಯುವತಿಯೊಬ್ಬಳು  ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯೊರ್ವರ ಜಾಡುಹಿಡಿಯ ಹೊರಟ ಮನೆಯವರಿಗೆ ಮಗಳೊಂದಿಗೆ ಪ್ರೀತಿಯ ನಾಟಕವಾಡಿದ್ದು ಮಂಗಳಮುಖಿ ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದ ಬಗ್ಗೆ ವರದಿಯಾಗಿದೆ.

ವಿಟ್ಲ ಮೂಲದ ಯುವತಿಯೋರ್ವರಿಗೆ ಫೇಸ್ ಬುಕ್ ಮೂಲಕ ಪರಿಚಯವಾದ ಜ್ಯೋತಿ ಎಂಬಾಕೆ ಪ್ರದೀಪ ಎಂಬ ಹೆಸರಿನಲ್ಲಿ ಸಿವಿಲ್ ಇಂಜಿನಿಯರ್ ಎಂದು ನಂಬಿಸಿ ಗಂಡಸಿನ ಧ್ವನಿಯಲ್ಲಿ ಮಾತನಾಡಿದ್ದರು.  ಕಳೆದ ಐದು ವರ್ಷಗಳಿಂದ ಅವರೊಂದಿಗೆ ಸ್ನೇಹಾಚಾರ ನಡೆಯುತ್ತಿತ್ತು, ಮದುವೆ ವಿಚಾರದಲ್ಲಿ ಹಾಗೂ ಆ ಯವಕನ ಸ್ನೇಹಾಚಾರದ ಕುರಿತಾಗಿ ಯುವತಿಗೆ ಹಾಗೂ ಮನೆಯವರಿಗೆ ಆಗಾಗ ಜಗಳವಾಗುತ್ತಿತ್ತು. ಯುವತಿಯ ಈ ವರ್ತನೆಯಿಂದ ಬೇಸತ್ತ ಆಕೆಯ ತಾಯಿ ತನ್ನ ಪರಿಚಯದ ವಕೀಲರೋರ್ವರಿಗೆ, ತನ್ನ ಮಗಳ ವರ್ತನೆ ಬಗ್ಗೆ ತಿಳಿಸಿದ್ದರು.

ಮನೆಯವರೊಂದಿಗೆ ಆ ವ್ಯಕ್ತಿಯ ಜಾಡು ಹಿಡಿಯ ಹೊರಟ ವಕೀಲೆ ಈ ಬಗ್ಗೆ ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಶಂಕರನಾರಾಯಣ ಪೊಲೀಸ್ ಠಾಣೆಗೆ ತೆರಳಿ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿ ಆ ವ್ಯಕ್ತಿಯ ಜಾಡು ಹಿಡಿಯುವಲ್ಲಿ ಸಫಲರಾದರು. ಈ ವೇಳೆ ಯುವತಿಯೊಂದಿಗೆ ಧ್ವನಿ ಬದಲಿಸಿ ಮಾತನಾಡುತ್ತಿರುವುದು ಓರ್ವ ಮಂಗಳಮುಖಿ ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ

. ಆ ಮಂಗಳಮುಖಿಗೆ ಯುವತಿಯ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿ ಮರಳಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಯುವತಿಯ ಐದು ವರ್ಷಗಳ ಪ್ರೇಮ ಪ್ರಕರಣ ಮನೆಯವರ ಮಧ್ಯಪ್ರವೇಶದಿಂದ ಅಂತ್ಯಕಂಡಿದೆ ಎಂದು ವರದಿಯಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top