




ಕಡಬ ಟೈಮ್ಸ್(KADABA TIMES):ನೆಲ್ಯಾಡಿ:ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ನೆಕ್ಕರೆ ನಿವಾಸಿ ಆನಂದ ಗೌಡ(33ವ.)ಎಂಬವರು ಹೆಬ್ರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜು.23ರಂದು ನಡೆದಿದೆ.
ಹೆಬ್ರಿಯ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದ ಆನಂದ ಗೌಡರವರಿಗೆ ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಅಲ್ಲದೆ ಹೊಸ ಕಾರನ್ನು ಖರೀದಿಸಿದ್ದರು ಎಂದು ತಿಳಿದು ಬಂದಿದೆ.

ಅವರು ವಾಸವಿದ್ದ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಯಾಗಿದೆ. ಮೃತ ಆನಂದ್ ತಂದೆ ಚಂದಪ್ಪ, ಅಕ್ಕ ವಿಜಯಾ ಹಾಗೂ ಅಣ್ಣ ಸತೀಶ್ ಅವರನ್ನು ಅಗಲಿದ್ದಾರೆ. ಆತ್ಮಹತ್ಯೆಯ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.