




ಕಡಬ ಟೈಮ್ಸ್(KADABA TIMES):ಪೂಜೆಗೆಂದು ತಂದ ಬೆಲ್ಲದೊಳಗೆ ಬ್ಯಾಟರಿ ಪತ್ತೆಯಾದ ಘಟನೆ ನೆಟ್ಟಣಿಗೆ ಮುಡ್ನೂರುನಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ನೆಟ್ಟಣಿಗೆ ಗ್ರಾಮದ ಪೆರ್ನಾಜೆ ರಾಮಕೃಷ್ಣ ಉಂಗ್ರುಪುಳಿತ್ತಾಯ ಎಂಬವರು ತನ್ನ ಮನೆಯಲ್ಲಿ ದೇವರ ಕೋಣೆಯಲ್ಲಿ ಎಂದಿನಂತೆ ಪೂಜೆಗೆ ಬೆಲ್ಲ ಇಟ್ಟಿದ್ದರು.

ಪೂಜೆಯ ಬಳಿಕ ಇಟ್ಟ ಬೆಲ್ಲವನ್ನು ಬಳಿಕ ಹುಡಿ ಮಾಡಿ ಅಡುಗೆಗೆಂದು ಬಳಸುವ ವೇಳೆ ಬೆಲ್ಲದೊಳಗೆ ಬ್ಯಾಟರಿ ಇರುವುದು ಪತ್ತೆಯಾಗಿದೆ.