




ಕಡಬ ಟೈಮ್ಸ್(KADABA TIMES):ಕಡಬ/ಹಳೆಸ್ಟೇಷನ್: ಮಧ್ಯರಾತ್ರಿ ಬಾಗಿಲು ಬಡಿದು ದಿಢೀರ್ ಮನೆಯೊಳಗೆ ಬಂದ ಖಾಕಿಧಾರಿಗಳನ್ನು ಕಂಡು ಮನೆ ಮಂದಿ ಗಲಿಬಿಲಿಗೊಂಡ ಘಟನೆ ಕುಟ್ರುಪ್ಪಾಡಿ ಗ್ರಾಮದಲ್ಲಿ ನಡೆದಿದೆ.
ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಬಜೆತ್ತಡ್ಕದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮನೆಯೊಂದಕ್ಕೆ ಜುಲೈ 24 ರ ರಾತ್ರಿ 12:30 ಕ್ಕೆ ಬಂದ ಖಾಕಿಧಾರಿಗಳು ಬಾಗಿಲು ಬಡಿದು ಮನೆ ಮಂದಿಯನ್ನು ಎಚ್ಚರಿಸಿದ್ದಾರೆ ಎನ್ನಲಾಗಿದೆ. ಬಳಿಕ ಮನೆಯೊಳಗೆ ನಿದ್ರಿಸಿದ್ದ ಓರ್ವನ ಕಾಲುಗಳನ್ನು ಟಾರ್ಚ್ ಬಳಸಿ ಸೂಕ್ಷ್ಮವಾಗಿ ಗಮನಿಸಿ ಬಳಿಕ ಮನೆಯ ಇನ್ನೊಂದು ಬಾಗಿಲಿನಲ್ಲೂ ಹುಡುಕಾಟ ನಡೆಸಿದ್ದಾರೆ.

ಪೊಲೀಸರನ್ನು ಕಂಡು ಮನೆಮಂದಿ ಗಲಿಬಿಲಿಗೊಂಡಿದ್ದಾರೆ. ಪೊಲೀಸರ ಬಳಿ ಬಂದಿರುವ ಕಾರಣ ಕೇಳಿದಾಗ ಉತ್ತರಿಸದೆ ಹೋಗಿದ್ದಾರೆ ಎನ್ನಲಾಗಿದೆ. ಯಾರನ್ನಾದರೂ ಅಟ್ಟಿಸಿಕೊಂಡು ಬಂದರೆ? ಅಥವಾ ಯಾರಾದರೂ ಪೊಲೀಸರಿಗೆ ಕಣ್ಣು ತಪ್ಪಿಸಿದ್ದಾರಾ? ಇತ್ಯಾದಿ ಪ್ರಶ್ನೆಗಳು ಮನೆ ಮಂದಿಯಲ್ಲಿ ಮನೆ ಮಾಡಿದ್ದು ಆತಂಕ ಮಾತ್ರ ಇನ್ನೂ ದೂರವಾಗಿಲ್ಲ.