




ಕಡಬ ಟೈಮ್ಸ್(KADABA TIMES):ಮಾಜಿ ಸೈನಿಕರೋರ್ವರು ನನಗೆ ಹಲ್ಲೆ ನಡೆಸಿರುವುದಾಗಿ ಎಂದು ಆರೋಪಿಸಿ ಕಾರ್ಮಿಕರೊಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ವರದಿಯಾಗಿದೆ.
ಪುತ್ತೂರಿನ ಬಪ್ಪಳಿಗೆ ತೆಂಕಿಲ ನಿವಾಸಿ ರವಿ ಹಲ್ಲೆಗೊಳಗಾದವರು. ಜುಲೈ 25 ರಂದು ಸಂಜೆ ಸರಕಾರಿ ನೌಕರರ ಸಭಾ ಭವನದ ಅಂಗಳವನ್ನು ಸ್ವಚ್ಛಗೊಳಿಸಿ, ಕಸವನ್ನು ಸೈನಿಕ ಭವನದ ಆವರಣದ ಪಕ್ಕ ರಾಶಿ ಹಾಕಿರುವುದಾಗಿ ಆರೋಪಿಸಿ ಮಾಜಿ ಸೈನಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ದಲಿತ ಸಮುದಾಯಕ್ಕೆ ಸೇರಿರುವ ರವಿ ಯವರ ಮೇಲೆ ಹಲ್ಲೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ದಲಿತ ಸಂಘಟನೆಯ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪೊಲೀಸರು ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದುಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.