




ಕಡಬ ಟೈಮ್ಸ್(KADABA TIMES):ಕರ್ನಾಟಕ ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ಕಡಬ ತಾಲೂಕಿನ ಕುಂತೂರು ಗ್ರಾಮದ ರಾಜೇಶ್ ಕುಂತೂರು ನೇಮಕಗೊಂಡಿದ್ದಾರೆ. ಈ ಹಿಂದೆ ಅರುಣ್ ಕುಮಾರ್ ನಿರ್ವಹಿಸಿದ ಜವಬ್ದಾರಿ ಇನ್ನು ಮುಂದೆ ಇವರ ಹೆಗಲ ಮೇಲೆರಲಿದೆ.ಅರುಣ್ ಕುಮಾರ್ ಮತ್ತೆ ತಮ್ಮ ಮಾತೃ ಸಂಸ್ಥೆಯಾದ ಅರ್ ಎಸ್ ಎಸ್ ಗೆ ಮರಳಲಿದ್ದಾರೆ.
ಬಿಜೆಪಿಯಲ್ಲಿ ಸಂಘಟನಾ ಕಾರ್ಯದರ್ಶಿ ಹುದ್ದೆ ಅತ್ಯಂತ ಮಹತ್ವದ ಹುದ್ದೆಯಾಗಿದ್ದು , ಇವರು ಪಕ್ಷ ಹಾಗೂ ಅರ್ ಎಸ್ ಎಸ್ ಮಧ್ಯೆ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ ಈ ಸ್ಥಾನದಲ್ಲಿ ಕರಾವಳಿ ಭಾಗದವರಾದ ಬಿ.ಎಲ್ ಸಂತೋಷ್ ಕಾರ್ಯನಿರ್ವಹಿಸಿದ್ದರು.
32ರ ಹರೆಯದ ರಾಜೇಶ್ ಅವರು ಕಡಬ ತಾಲೂಕಿನ ಕುಂತೂರು ಗ್ರಾಮದ ನೂಜಿಲ ನಿವಾಸಿ ವೀರಪ್ಪ ಹಾಗೂ ದಿ. ಚೆನ್ನಮ್ಮರವರ ಪುತ್ರ. ರಾಜೇಶ್ ತಂದೆ ಕೂಲಿ ಕಾರ್ಮಿಕರಾಗಿದ್ದಾರೆ. ಸಾಮಾನ್ಯ ಕುಟುಂಬದ ವ್ಯಕ್ತಿ ಅತೀ ದೊಡ್ಡ ಜವಬ್ದಾರಿಯೊಂದು ದೊರೆತಂತಾಗಿದೆ.

ಬಾಲ್ಯದಲ್ಲೆ ಅರ್ ಎಸ್ ಎಸ್ ಸಂಘಟನೆಯ ಬಗ್ಗೆ ಒಲವು ಹೊಂದಿದ್ದ ಅವರು ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಅವರು ಪದವಿ ಶಿಕ್ಷಣ ಪೂರೈಸಿದ್ದಾರೆ.ವಿದ್ಯಾರ್ಥಿ ಜೇವನದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಪುತ್ತೂರು ಗ್ರಾಮಾಂತರ ತಾಲೂಕಿನ ಅರಿಯಡ್ಕ ಮಂಡಲದ ಮಂಡಲ ಕಾರ್ಯವಾಹರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಪದವಿ ವಿದ್ಯಾಭ್ಯಾಸ ಮುಗಿಸಿದ ನಂತರ ಸಂಘದ ಪ್ರಚಾರಕರಾಗಿ ತನ್ನ ಪೂರ್ಣ ಜೇವನವನ್ನು ಸಂಘ ಕಾರ್ಯಕ್ಕೆ ಅರ್ಪಿಸಿ ಮೂಡಬಿದ್ರೆ ತಾಲೂಕು ಪ್ರಚಾರಕರಗಿ, ಸಾಗರ ಜಿಲ್ಲಾ ಪ್ರಚಾರಕರಾಗಿ,ಶಿವಮೊಗ್ಗ ಜಿಲ್ಲಾ ಪ್ರಚಾರಕರಾಗಿ,ಮೈಸೂರು ವಿಭಾಗ ಪ್ರಚಾರಕರಾಗಿ ಪ್ರಸ್ತುತ ತುಮಕೂರು ವಿಭಾಗ ಪ್ರಚಾರಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಸಮನ್ವಯ ಬೈಠಕ್ ನಲ್ಲಿ ನೂತನ ಜವಾಬ್ದಾರಿ ಘೋಷಣೆ ಮಾಡಲಾಯಿತು.ಹಿಂದಿನ ಸಂಘಟನಾ ಕಾರ್ಯದರ್ಶಿಯಾಗಿದ್ದ ಶ್ರೀ ಅರುಣ್ ಕುಮಾರ್ ರವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಹಾಗು ದಕ್ಷಿಣ ಪ್ರಾಂತ್ಯದ ಪ್ರಚಾರ ಪ್ರಮುಖರಾಗಿ ನಿಯುಕ್ತಿಗೊಳಿಸಲಾಗಿದೆ