ವಿವಾಹಿತ ಮಹಿಳೆ ಜೊತೆ ಅಸಭ್ಯ ವರ್ತನೆ: ಮಾಜಿ ಯೋಧ ಅರೆಸ್ಟ್

ವಿವಾಹಿತ ಮಹಿಳೆ ಜೊತೆ ಅಸಭ್ಯ ವರ್ತನೆ: ಮಾಜಿ ಯೋಧ ಅರೆಸ್ಟ್

Kadaba Times News

ಕಡಬ ಟೈಮ್ಸ್(KADABA TIMES):ವಿವಾಹಿತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಖಾಸಗಿ ಕಂಪನಿಯೊಂದರಲ್ಲಿ ಸಿಬ್ಬಂದಿಯಾಗಿರುವ ಮಾಜಿ ಸೈನಿಕನನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಕಂಪನಿ ಭದ್ರತಾ ಸಿಬ್ಬಂದಿ ಹಾಗೂ ಮಾಜಿ ಯೋಧ ಕುಂಬ್ರ ಕುರಿಕ್ಕಾರ ನಿವಾಸಿ ವಿದೀಪ್ ಕುಮಾರ್ ಬಂಧಿತ ಆರೋಪಿ.

ತಿಂಗಳಾಡಿ ನಿವಾಸಿ ವಿವಾಹಿತ ಮಹಿಳೆ ಆರೋಪಿ ಕೆಲಸ ಮಾಡುವ ಕಂಪೆನಿಯಲ್ಲೇ ಕೆಲಸ ಮಾಡುತ್ತಿದ್ದರು. ಜು.16ರಂದು ಮಹಿಳೆ ತನ್ನ ಕೆಲಸ ಮುಗಿಸಿ ಕುಂಬ್ರದಿಂದ ತಿಂಗಳಾಡಿಗೆ ಬಸ್ನಲ್ಲಿ ಪ್ರಯಾಣಿಸಿ ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು.

ಆರೋಪಿ ತನ್ನ ಬೈಕ್ ನಲ್ಲಿ ಆಕೆಯನ್ನು ಹಿಂಬಾಲಿಸಿ ತಿಂಗಳಾಡಿ ದರ್ಬೆ ಎಂಬಲ್ಲಿ ಅಡ್ಡಗಟ್ಟಿ ಆಕೆಯೊಂದಿಗೆ ಮಾತನಾಡಲು ಯತ್ನಿಸಿ ಅಸಭ್ಯವಾಗಿ ವರ್ತಿಸಿದ್ದು, ಬಳಿಕ ಸಾರ್ವಜನಿಕರು ಬರುತ್ತಿರುವುದನ್ನು ಗಮನಿಸಿ ಸ್ಥಳದಿಂದ ಹೋಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸಂಪ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top