




ಕಡಬ ಟೈಮ್ಸ್(KADABA TIMES):ಕಡಬ/ಸುಬ್ರಹ್ಮಣ್ಯ: ಘಟ್ಟ ಪ್ರದೇಶ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಮಾರಧಾರಾ ನದಿ ಉಕ್ಕಿಹರಿಯುತ್ತಿವೆ.
ಭಾರೀ ಮಳೆಗೆ ಕಡಬ – ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯ ನೀರು ರಸ್ತೆಗೆ ನುಗ್ಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ .

ಕೆಲವು ವಾಹನಗಳು ನೆರೆ ನೀರಿನಲ್ಲಿ ಸಂಚರಿಸುತ್ತಿದೆಯಾದರೂ, ಹಲವರು ಪುಳಿಕುಕ್ಕು, ಎಡಮಂಗಲ, ನಿಂತಿಕಲ್ಲು ರಸ್ತೆಯನ್ನು ಬಳಸಿ ಮೂಲಕ ಪಂಜಕ್ಕೆ ತೆರಳುತ್ತಿದ್ದಾರೆ.ಇನ್ನು ಕುಮಾರಧಾರ ನದಿ ತಪ್ಪಲಿನ ತಗ್ಗು ಕೃಷಿ ಪ್ರದೇಶಗಳು ಜಲಾವೃತಗೊಂಡಿದೆ.