




ಕಡಬ ಟೈಮ್ಸ್(KADABA TIMES):ಕಡಬ: ಇಚ್ಲಂಪಾಡಿ ಗ್ರಾಮದ ಕೊರಮೇರು ಎಂಬಲ್ಲಿ ಗುಡ್ಡ ಕುಸಿತ ಗೊಂಡು 1 ಆಟೋ ರಿಕ್ಷಾ ಹಾಗೂ ನಾಲ್ಕು ದ್ವಿಚಕ್ರ ವಾಹನಗಳು ಹಾನಿಗೊಂಡಿರುವ ಘಟನೆ ಜುಲೈ 18 ರಂದು ಬೆಳಿಗ್ಗೆ ನಡೆದಿದೆ.
ಕೊರಮೇರು ನಿವಾಸಿ ನೋಣಯ್ಯ ಗೌಡರವರ ಮನೆಯ ಹಿಂಬದಿಯ ಗುಡ್ಡ ಕುಸಿತ ಗೊಂಡು ಅಲ್ಲಿ ನಿಲ್ಲಿಸಿದ ವಾಹನಗಳ ಮೇಲೆಯೇ ಮಣ್ಣು ಬಿದ್ದಿದೆ. ನೋಣಯ್ಯ ಗೌಡರ ಸ್ಕೂಟರ್, ಅವರ ಸಹೋದರ ಕೇಶವ ಗೌಡರವರಿಗೆ ಸೇರಿದ ಆಟೋ ರಿಕ್ಷಾ, ವಸಂತ ಗೌಡ ಎಂಬವರ ಸ್ಕೂಟರ್ ಹಾಗೂ ಹೊನ್ನಪ್ಪ ಗೌಡ ಎಂಬವರಿಗೆ ಸೇರಿದ ಎರಡು ಸ್ಕೂಟರ್ ಮಣ್ಣಿನ ಅಡಿಗೆ ಬಿದ್ದು ಜಖಂಗೊಂಡಿದೆ.

ಈ ಸುದ್ದಿಯನ್ನು ಓದಿರಿ:ಕಡಬ:ಠಾಣಾಧಿಕಾರಿ ನಡೆ ದಲಿತ ಕಾಲನಿ ಕಡೆ: ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ ಭೇಟಿ ಮಾಡಿದ ಎಸ್.ಐ ಆಂಜನೇಯ ರೆಡ್ಡಿ
ಮಣ್ಣು ಬಿದ್ದಿರುವುದರಿಂದ ನೋಣಯ್ಯ ಗೌಡರವರ ಮನೆ ಹಿಂಬದಿ ಜಾಗಕ್ಕೂ ಹಾನಿಯಾಗಿದೆ. ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯ ವಿಶ್ವನಾಥ, ಗ್ರಾಮ ಸಹಾಯಕ ಅನಿಲ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.