




ಕಡಬ ಟೈಮ್ಸ್(KADABA TIMES):ಕಡಬ: ಠಾಣೆಯಲ್ಲಿ ನಡೆದ ಪ.ಜಾ/ಪ.ಪಂ ದ ಸಭೆಯಲ್ಲಿ ನಿರ್ಣಯಿಸಿದಂತೆ ಕಡಬ ಠಾಣಾಧಿಕಾರಿ ಕಾಲನಿಗಳಿಗೆ ಭೇಟಿ ನೀಡಿ ಸಭೆ ನಡೆಸಲು ಮುಂದಾಗಿದ್ದಾರೆ.
ಮೊದಲ ಸಭೆಯು ನೂಜಿಬಾಳ್ತಿಲ ಗ್ರಾಮದ ರೆಂಜಿಲಾಡಿಯಲಿ ಎ.ಐ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಿತು.ಕಾಲನಿ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಎಸ್.ಐ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಸೂಚಿಸಿದರು.ಅಲ್ಲದೆ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಿದರು.

ಇದೇ ವೇಳೆ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ ಭೇಟಿ ಮಾಡಿ ಮನವೊಲಿಸಿ ಶಾಲೆಗೆ ಕಳಿಸುವ ವ್ಯವಸ್ಥೆ ಮಾಡಲಾಯಿತು.ಈ ಸಂದರ್ಭದಲ್ಲಿ ಎ.ಎಸೈ ಶಿವರಾಮ, ಹೇಡ್ ಕಾನ್ಸ್ಟೇಬಲ್ ಭವಿತ್ ರೈ, ಪೋಲಿಸ್ ಅಧಿಕಾರಿಗಳಾದ ವಿನೋದ್, ಪ್ರಶಾಂತ್ ,ದಲಿತ ಮುಂದಾಳು ಗುರುವಪ್ಪ ಕಲ್ಲುಗುಡೆ, ಸುಂದರಿ ,ಶೋಭಾ, ಅಂಗಜ,ಕುಂಞಪ್ಪ, ವಸಂತ ಕುಬಲಾಡಿ ಸೇರಿದಂತೆ ಪ್ರಮುಖರು ಹಾಜರಿದ್ದರು.