




ಕಡಬ ಟೈಮ್ಸ್(KADABA TIMES):ಕಡಬ:ನೂಜಿಬಾಳ್ತಿಲ ಗ್ರಾಮದ ಕನ್ವರೆಯಲ್ಲಿ ತಡ ರಾತ್ರಿ ಜಾನುವಾರು ಸಾಗಾಟ ಮಾಡಲಾಗಿದ್ದು, ಓರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.
ಕನ್ವರೆ-ಕಳಾರ ರಸ್ತೆಯ ಕನ್ವರೆ ಕ್ರಾಸ್ ಬಳಿ ಆಪೆ ರಿಕ್ಷಾದಲ್ಲಿ ಜಾನುವಾರುವೊಂದನ್ನು ಸ್ಥಳೀಯ ವ್ಯಕ್ತಿಗಳು ಸಾಗಾಟ ಮಾಡಿರುವುದಾಗಿದೆ.

ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿದಾಗ ಜಾನುವಾರು ಸಹಿತ ವ್ಯಕ್ತಿಗಳು ಪರಾರಿಯಾಗಿದ್ದಾರೆ.ಓರ್ವ ವ್ಯಕ್ತಿ ಸಿಕ್ಕಿದ್ದು ಈತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.