ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ:ಕಡಬದ ವೆಂಕಟರಮಣ ಮಂಕುಡೆ ಗೆ ಉಜಿರೆಯಲ್ಲಿ ಸನ್ಮಾನ

ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ:ಕಡಬದ ವೆಂಕಟರಮಣ ಮಂಕುಡೆ ಗೆ ಉಜಿರೆಯಲ್ಲಿ ಸನ್ಮಾನ

Kadaba Times News

ಕಡಬ ಟೈಮ್ಸ್(KADABA TIMES):ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ಮಂಕುಡೆ ಅವರನ್ನು ಆಸರೆ ರುಡ್ ಸೆಟ್ ಯಶಸ್ವಿ ಉದ್ಯಮಿಗಳ ಸಂಘ ಸನ್ಮಾನಿಸಿದೆ.

ರುಡ್‌ಸೆಟ್ ಸಂಸ್ಥೆಯ ಸಭಾಂಗಣದಲ್ಲಿ  ನಡೆದ 2022-24ನೇ ಸಾಲಿನ ಆಸರೆ ರುಡ್ ಸೆಟ್ ಯಶಸ್ವಿ ಉದ್ಯಮಿಗಳ ಸಂಘದ ನೂತನ ಪದಾಧಿ ಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಗಿದೆ.ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ವೆಂಕಟರಮಣ ಮಂಕುಡೆ, ಅಂತಾರಾಷ್ಟ್ರೀಯ  ಕ್ರೀಡಾಪಟು ಸುಭಾಶ್ಚಂದ್ರ ರೈ, ಭರತನಾಟ್ಯ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ  ಮತ್ತು ಧ್ವನಿ ಮಾಯೆ ಕಲಾವಿದೆ ಸಾಯಿ ಶ್ರುತಿ ಪಿಲಿಕಜೆ ಅವರನ್ನು ಸನ್ಮಾನಿಸಲಾಯಿತು.

ಈ ಸುದ್ದಿಯನ್ನೂ ಓದಿರಿ:ಬೈಕ್ ನಲ್ಲಿ ತೆರಳುತ್ತಿದ್ದಾಗ ಸವಾರನ ಮೈಮೇಲೆ ಜಿಗಿದ ಕಡವೆ:ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ ಕಲ್ಲಾಪುರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆದಿದ್ದು  ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ವೃತ್ತಕಚೇರಿಯ ಉಪಮಹಾ ಪ್ರಬಂಧಕ ರಾಘವ ನಾಯ್ಕ, ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಸುರೇಶ್‌ ಎಂ., ಉಪನ್ಯಾಸಕರಾದ ಅಬ್ರಾಹಂ ಜೇಮ್ಸ್, ಅನುಸೂಯ ರೈ ಮತ್ತು ಸಂಘದ ಸ್ಥಾಪಕಾಧ್ಯಕ್ಷ ಸುನೀಲ್ ರೈ ಬೆಳ್ಳಾರೆ ಭಾಗವಹಿಸಿದ್ದರು.

ನಿಕಟ ಪೂರ್ವ ಅಧ್ಯಕ್ಷ ಪ್ರಶಾಂತ್ ಲಾಯಿಲ ಸ್ವಾಗತಿಸಿದರು. ಕಾರ್ಯದರ್ಶಿ ಗೌತಮ್ ಕುಕ್ಯಾನ್‌ ವರದಿ ವಾಚಿಸಿದರು. ನಿರ್ದೇಶಕ ನಾಗರಾಜ್ ಎನ್.ಕೆ. ನಿರೂಪಿಸಿದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top