




ಕಡಬ ಟೈಮ್ಸ್(KADABA TIMES):ಓಮ್ನಿ ಕಾರು ಮತ್ತು ಆಕ್ಟಿವಾ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ಪುತ್ತೂರಿನ ಬಪ್ಪಳಿಗೆಯ ಬಲ್ನಾಡ್ ರಸ್ತೆಯಲ್ಲಿ ನಡೆದಿದೆ.
ಬಪ್ಪಳಿಗೆಯ ಬಲ್ನಾಡ್ ಸಂಪರ್ಕ ರಸ್ತೆಯಲ್ಲಿ ಬಲ್ನಾಡ್ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಓಮ್ನಿ ಕಾರು, ಪುತ್ತೂರು ಕಡೆಯಿಂದ ಬರುತ್ತಿದ್ದ ರಿಕ್ಷಾ ಒಂದನ್ನು ಹಿಂದಿಕ್ಕುವ ಭರದಲ್ಲಿದ್ದ ಆಕ್ಟಿವಾಗೆ ಢಿಕ್ಕಿಯಾಗಿದೆ.

ಘಟನೆಯಿಂದ ಆಕ್ಟಿವಾ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದ್ದು ಹೆಚ್ಚಿನ ಮಾಹಿತಿ ಲಭಿಸಿಲ್ಲ.