




ಕಡಬ ಟೈಮ್ಸ್(KADABA TIMES): ನಿರಂತರ ಧಾರಾಕಾರ ಮಳೆಯಿಂದಾಗಿ ವೇಣೂರಿನ ಫಲ್ಗುಣಿ ನದಿಯಲ್ಲಿ ಅಪರಿಚಿತ ಶವವೊಂದು ಜು.9 ರಂದು ಕಂಡು ಬಂದಿರುವ ಘಟನೆ ನಡೆದಿದೆ.
ಫಲ್ಗುಣಿ ನದಿಯಲ್ಲಿ ತೇಲಿ ಬರುತ್ತಿದ್ದ ವ್ಯಕ್ತಿಯ ಶವವನ್ನು ಕಂಡ ಅಲ್ಲಿಯ ಸ್ಥಳೀಯರು ಚಿತ್ರೀಕರಿಸಿದ್ದಾರೆ.
ಮಾಹಿತಿ ತಿಳಿದು ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ. ವ್ಯಕ್ತಿಯ ಶವದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
