ಮುಂಜಾಗೃತೆ ವಹಿಸದೆ ವಿದ್ಯುತ್ ಕಂಬ ಸಾಗಟ: ಮೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಗರಂ

ಮುಂಜಾಗೃತೆ ವಹಿಸದೆ ವಿದ್ಯುತ್ ಕಂಬ ಸಾಗಟ: ಮೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಗರಂ

Kadaba Times News

ಕಡಬ ಟೈಮ್ಸ್(KADABA TIMES):ಸುಳ್ಯ: ವಿದ್ಯುತ್ ಕಂಬ ಸಾಗಟದ ವೇಳೆ ಇಲಾಖಾ ಸಿಬ್ಬಂದಿಗಳು ನಿರ್ಲಕ್ಷ್ಯವಹಿಸಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ವಿದ್ಯುತ್ ಕಂಬಗಳ ಸಾಗಾಟದ ದೃಶ್ಯವನ್ನು ಸ್ಥಳೀಯರು  ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಜೂನ್ ೯ ರಂದು  ಸಂಜೆ  ಸುಳ್ಯದ ಶ್ರಿರಾಮ್ ಪೇಟೆ ಬಳಿ ಜಟ್ಟಿಪಳ್ಳ ರಸ್ತೆಯ ಕಡೆಗೆ   ಈಚರ್ ವಾಹನದಲ್ಲಿ ವಿದ್ಯುತ್ ಕಂಬವನ್ನು ಸಾಗಾಟ ಮಾಡಲಾಗಿದೆ. ನಿಯಮ ಪ್ರಕಾರ ವಾಹನಗಳಲ್ಲಿ ವಾಹನದ ಉದ್ದ ಅಳತೆಯ ಲೆಕ್ಕಕ್ಕಿಂತ ಇನ್ನೂ ಹೆಚ್ಚಿನ ವಿಸ್ತೀರ್ಣದ ಯಾವುದೇ ಸರಕು ಸಾಮಗ್ರಿಗಳನ್ನು ರವಾನಿಸುವ ಸಂದರ್ಭ ಕನಿಷ್ಠಪಕ್ಷ  ಸಾಮಗ್ರಿಯ ತುದಿ ಭಾಗಕ್ಕೆ ಎಚ್ಚರಿಕೆ ನೀಡುವ ಬಟ್ಟೆಯ ತುಂಡುಗಳನ್ನು ಅಳವಡಿಸಲಾಗುತ್ತಿದೆ.

ಹೀಗಾಗಿ ಹಿಂಬದಿಯಿಂದ ಬರುವ ವಾಹನ ಚಾಲಕರಿಗೆ  ಸೂಚನೆ ಲಭಿಸುತ್ತದೆ. ಆದರೆ ಇಂದು ನಡೆದ ಘಟನೆಯಲ್ಲಿ ಯಾವುದೇ ರೀತಿಯ ಮುಂಜಾಗೃತೆ ವಹಿಸದೆ ವಿದ್ಯುತ್ ಕಂಬದ ಸಾಗಾಣಿಕೆ ಮಾಡಲಾಗಿದೆ ಎಂದು ದೂರು ವ್ಯಕ್ತವಾಗಿದೆ. ಇದನ್ನು ನೋಡಿದ ಈ ಭಾಗದಲ್ಲಿ ಬರುತ್ತಿದ್ದ ವಾಹನ ಚಾಲಕರು  ಇಲಾಖೆ  ಸಿಬ್ಬಂದಿಗಳ  ನಿರ್ಲಕ್ಷ್ಯತನದ ಬಗ್ಗೆ ಆಕ್ರೋಶವ್ಯಕ್ತಪಡಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top