




ಕಡಬ ಟೈಮ್ಸ್(KADABA TIMES):ನೆಲ್ಯಾಡಿ: ಬಸ್ ಗಳ ಓವರ್ ಟೇಕ್ ನಿಂದಾಗಿ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸಿಮೆಂಟ್ ಹೊತ್ತ ಲಾರಿಯೊಂದು ಕಂದಕಕ್ಕೆ ಉರುಳಿಬಿದ್ದ ಘಟನೆ ನೆಲ್ಯಾಡಿ ಸಮೀಪದ ಪೆರಿಯಶಾಂತಿಯಲ್ಲಿ ಇಂದು ಮೂಂಜಾನೆ 4ರ ಸುಮಾರಿಗೆ ನಡೆದಿದೆ.
ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದು ಗಾಯಗೊಂಡ ಚಾಲಕ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆದ್ದಾರಿ ಮೂಲಕ ದೊಡ್ಡಬಳ್ಳಾಪುರದಿಂದ ಕಾರ್ಕಳಕ್ಕೆ ಸಿಮೆಂಟ್ ಕೊಂಡು ಹೊತ್ತುಕೊಂಡು ಹೋಗುತ್ತಿದ್ದ ಲಾರಿ ಇದಾಗಿದೆ ಬಸ್ ಗಳೆರಡು ಓವರ್ ಟೇಕ್ ಮಾಡಿಕೊಂಡು ಬಂದಿದ್ದು ಢಿಕ್ಕೆಯಾಗುವು ದನ್ನು ತಪ್ಪಿಸಲು ರಸ್ತೆ ಬದಿಗೆ ತಿರುಗಿಸಿದ್ದರು. ರಸ್ತೆ ಅಗಲೀಕರಣ ಸಂದರ್ಭ ನಿಯಂತ್ರಣ ಕಳೆದುಕೊಂಡು ಮಂಗಳೂರು-ಬೆಂಗಳೂರು ಹೆದ್ದಾರಿ ಬದಿ ತೋಡಿದ್ದ ಕಂದಕಕ್ಕೆ ಉರುಳಿ ಬಿದ್ದಿದೆ.