




ಕಡಬ ಟೈಮ್ಸ್(KADABA TIMES):ನೆಲ್ಯಾಡಿ: ಹೊರ ಜಿಲ್ಲೆಯ ಜನರನ್ನು ಕರೆತಂದು ನೆಲ್ಯಾಡಿ ಸಮೀಪದ ಕ್ರೈಸ್ತ ಪ್ರಾರ್ಥನಾ ಮಂದಿರದಲ್ಲಿ ಮತಾಂತರ ನಡೆಸಲಾಗುತ್ತಿದೆ ಎನ್ನುವ ಹಿಂದೂ ಸಂಘಟನೆಗಳ ಆರೋಪದಲ್ಲಿ ಹುರುಳಿಲ್ಲ ಎನ್ನುವ ಅಂಶ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಕೊಣಾಲು ಗ್ರಾಮದ ಆರ್ಯ ಎಂಬಲ್ಲಿರುವ ಮೊರ್ಯ ಎಂಬ ಕ್ರೈಸ್ತ ಧ್ಯಾನ ಮಂದಿರದಲ್ಲಿ ಮತಾಂತರ ಚಟುವಟಿಕೆ ನಡೆಯುತ್ತಿದೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದ್ದರು. ಹಿನ್ನಲೆಯಲ್ಲಿ ಜೂ . 4 ರಂದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.

ಪೊಲೀಸರ ಪರಿಶೀಲನೆಯ ವೇಳೆ ಶಿವಮೊಗ್ಗ ಜಿಲ್ಲೆಗೆ ಸೇರಿದ 27 ಮಂದಿ ಪತ್ತೆಯಾಗಿದ್ದರು. ಇದರಲ್ಲಿ 18 ಹೆಂಗಸರು, 8 ಗಂಡಸರು ಹಾಗೂ ಹಾಗು ಓರ್ವ 6 ವರ್ಷದ ಬಾಲಕ ಸೇರಿದ್ದರು.ಇವರನ್ನು ಪೊಲೀಸರು ವಿಚಾರಣೆ ನಡೆಸಿದ ವೇಳೆ ತಾವು ಪ್ರಾರ್ಥನಾ ಮಂದಿರಕ್ಕೆ ಸ್ವ ಇಚ್ಚೆಯಿಂದ ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ತಾವು ಶಿವಮೊಗ್ಗ ಜಿಲ್ಲೆಯವರು. ನಮ್ಮಲ್ಲಿ ಮಧ್ಯ ವ್ಯಸನಿಗಳು ಹಾಗೂ ಮಾನಸಿಕ ಖಾಯಿಲೆಗೆ ತುತ್ತಾದವರು ಇದ್ದಾರೆ. ಇಲ್ಲಿ ಧ್ಯಾನ ಮಾಡುವುದರಿಂದ ಆರೋಗ್ಯ ಸುಧಾರಣೆ ಅಗುವುದಾಗಿ youtube ನಲ್ಲಿ ಮಾಹಿತಿ ಹಾಕಲಾಗಿದ್ದು , ಅದನ್ನು ವೀಕ್ಷಿಸಿ ಇಲ್ಲಿಗೆ ಆ ಆಗಮಿಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಅಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ KSRTC ಬಸ್ಸಿನಲ್ಲಿ ಧ್ಯಾನ ಕೇಂದ್ರಕ್ಕೆ ಆಗಮಿಸಿರುವುದಾಗಿಯೂ, ಯಾರೂ ಕೂಡ ನಮ್ಮನ್ನುವ ಇಲ್ಲಿಗೆ ಒತ್ತಾಯಪೂರ್ವಕವಾಗಿ ಕರೆದುಕೊಂಡು ಬಂದಿರುವುದಿಲ್ಲ ಹಾಗು ಯಾವುದೇ ಮತಾಂತರಕ್ಕೆ ಒಳಪಡಿಸಿರುವುದಿಲ್ಲ ಎಂಬುವುದಾಗಿಯೂ ಅವರು ಪೊಲೀಸರಿಗೆ ಸ್ಪಷ್ಟ ಪಡಿಸಿದ್ದಾರೆ.