ವಿಟ್ಲದಲ್ಲಿ ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕನ ಜೀವ ತೆಗೆದ ಜೆಸಿಬಿ

ವಿಟ್ಲದಲ್ಲಿ ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕನ ಜೀವ ತೆಗೆದ ಜೆಸಿಬಿ

Kadaba Times News

ಕಡಬ ಟೈಮ್ಸ್(KADABA TIMES):ವಿಟ್ಲ: ಇಲ್ಲಿನ ಕನ್ಯಾನದ ಕಣಿಯೂರು ಎಂಬಲ್ಲಿನ ಉದ್ಯಮಿಯ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಜೆಸಿಬಿ ಸೈಕಲ್ ಚಲಾಯಿಸುತ್ತಿದ್ದ ಬಾಲಕನ ಮೇಲೆ ಎರಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟ ಬಾಲಕನ ಹೆಸರು( ೧೩ ವರ್ಷ) ಅಖಿಲ್ . ಜೆಸಿಬಿ ಚಾಲಕನನ್ನು ಗದಗ ಮೂಲದ ಸಾದಿಕ್ ಎಂದು ಗುರುತಿಸಲಾಗಿದೆ.

ಚಾಲಕ ತನ್ನ ನಿರ್ಲಕ್ಷ್ಯದ ಚಲಾವಣೆಯಿಂದ ಜೆಸಿಬಿ ಬಾಲಕನ ಮೇಲೆ ಎರಗಿದೆ. ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕನನ್ನು ಜೆಸಿಬಿ ಕೊಕ್ಕಿನಿಂದ ಪಕ್ಕಕ್ಕೆ ಸರಿಸಿ ಅಲ್ಲಿಂದ ತೆರಳಿರುವುದಾಗಿ ಆರೋಪಿಸಲಾಗಿದೆ.

ಬೇರೊಬ್ಬ ಡ್ರೈವರ್ ಬರುತ್ತಾನೆಂದು ಹೇಳಿ ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಊರಿನವರಿಗೆ ವಿಷಯ ತಿಳಿದು ಊರವರು ಒಟ್ಟು ಸೇರಿ ಜೆಸಿಬಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.

ಈ ಘಟನೆ ಸುದ್ದಿಯಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಜೆಸಿಬಿ ಸಹಿತ ಚಾಲಕನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top