




ಕಡಬ ಟೈಮ್ಸ್(KADABA TIMES):ಕುಟ್ರುಪ್ಪಾಡಿ:ಇಲ್ಲಿನ ಬಲ್ಯ ಗ್ರಾಮದ ಕೇರ್ಪುಡೆ, ಏನಡ್ಕ, ಕೆರನಡ್ಕ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಏನಡ್ಕ ಸಮೀಪ ಕೆಸರುಮಯಗೊಂಡಿದ್ದ ಭಾಗವನ್ನು ಗ್ರಾ.ಪಂ ದುರಸ್ತಿಗೊಳಿಸುತ್ತಿರುವ ಚಿತ್ರಗಳನ್ನು ಗ್ರಾ.ಪಂ ಅಧ್ಯಕ್ಷ ಮೋಹನ್ ಕೆರೆಕೋಡಿ ಮಾಧ್ಯಮಕ್ಕೆ ನೀಡಿದ್ದಾರೆ.
ಅನಗತ್ಯವಾಗಿ ಮೊರಿ ನಿರ್ಮಸಿ ಜನರಿಗೆ ತೊಂದರೆ ನೀಡಲಾಗಿದೆ ಎಂದು ಆರೋಪಿಸಿ ಬಲ್ಯ ಗ್ರಾಮಸ್ಥರು ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ನೀಡಿ ಗ್ರಾ.ಪಂ ಸ್ಪಂದಿಸಿಲ್ಲ ಎಂಬ ಆರೋಪವನ್ನು ಗ್ರಾ.ಪಂ ಅಧ್ಯಕ್ಷ ತಳ್ಳಿ ಹಾಕಿದ್ದಾರೆ.
ಈ ಬಗ್ಗೆ ಕುಟ್ರುಪ್ಪಾಡಿ ಗ್ರಾ.ಪಂ ಅಧ್ಯಕ್ಷ ಮೋಹನ್ ಕೆರೆಕೋಡಿ ಪ್ರತಿಕ್ರಿಯೆ ನೀಡಿ, ಬಲ್ಯ ಗ್ರಾಮದ ಕೇರ್ಪುಡೆ ಎಂಬಲ್ಲಿ ರಸ್ತೆ ಕೆಸರುಮಯವಾಗಿರುವ ಬಗ್ಗೆ ಗ್ರಾ.ಪಂ ಯಾವುದೇ ಲಿಖಿತ ದೂರು ಸಲ್ಲಿಕೆಯಾಗಿರುವುದಿಲ್ಲ .ಈ ಬಗ್ಗೆ ದೂರವಾಣಿ ಮೂಲಕ ಗ್ರಾಮಸ್ಥರು ಹಾಗೂ ಆ ವ್ಯಾಪ್ತಿಯ ಸದಸ್ಯರು ತಿಳಿಸಿದ್ದು ನಾವು ಸ್ಪಂದಿಸಿದ್ದೇವೆ.

ಪಿಡಿಒ ಸಹಿತ ನಮ್ಮ ಗ್ರಾ.ಪಂ ತಂಡ ಕೆಸರುಮಯ ಗೊಂಡ ರಸ್ತೆ ಪ್ರದೇಶಕ್ಕೆ ಭೇಟಿ ನೀಡಿ ಕೆಂಪು ಕಲ್ಲು ಹಾಸಲಾಗಿದೆ. ಗ್ರಾ. ವಿಶೇಷ ಮುತುವರ್ಜಿವಹಿಸಿ ತುರ್ತು ದುರಸ್ಥಿಗೆ ಕ್ರಮ ಕೈಗೊಂಡಿದೆ. ರಸ್ತೆಯ ದುರಸ್ತಿಗೆ ಸ್ಪಂದಿಸಿರುವುದಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾಗಿರುತ್ತದೆ.
ಆ ರಸ್ತೆಯನ್ನೇ ಅವಲಂಬಿಸಿರುವ ಗ್ರಾಮಸ್ಥರಲ್ಲಿ ದೂರವಾಣಿ ಮೂಲಕ ರಸ್ತೆ ದುರಸ್ತಿಗೆ ನಮ್ಮೊಂದಿಗೆ ಕೈ ಜೋಡಿಸುವಂತೆ ವಿನಂತಿಸಿಕೊಂಡರೂ ಗ್ರಾಮಸ್ಥರು ಸ್ಪಂದಿಸಿರುವುದಿಲ್ಲ . ರಸ್ತೆ ಸರಿಪಡಿಸಿದರೂ ಆದರೆ ಏಕಾ ಏಕಿ ತಾಲೂಕು ಪಂಚಾಯತಿಗೆ ದೂರು ನೀಡಿರುವುದು ಬೇಸರದ ವಿಷಯವಾಗಿದೆ.. ಅಭಿವೃದ್ದಿ ಕಾರ್ಯಕ್ರಮದಲ್ಲಿ ತಪ್ಪಾಗುವುದು ಸಹಜ, ಇದನ್ನು ಗ್ರಾಮ ಪಂಚಾಯತ್ ಹಂತದಲ್ಲೇ ಬಗೆಹರಿಸಬಹುದಾಗಿತ್ತು ಎಂದಿದ್ದಾರೆ.ಅಲ್ಲದೆ ಗುತ್ತಿಗೆ ದಾರರಿಗೆ ರಸ್ತೆಯನ್ನು ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿರ್ವಹಿಸಲು ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.