




ಕಡಬ ಟೈಮ್ಸ್(KADABA TIMES):ಪ್ರವಾದಿ ಅವಹೇಳನದ ವಿರುದ್ಧ ನಡೆದ ಹಿಂಸಾಚಾರ ಖಂಡಿಸಿ ನಾಳೆ ದೇಶಾದ್ಯಂತ ವಿಹೆಚ್‌ಪಿ ಪ್ರತಿಭಟನೆ ಹಮ್ಮಿಕೊಂಡಿದೆ.ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ವಿಹೆಚ್‌ಪಿ ಹಾಗೂ ಬಜರಂಗದಳದ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಮತಿ ನಿರಾಕರಿಸಿದ್ದಾರೆ.
ಈ ಬಗ್ಗೆ ಆದೇಶ ಹೊರಡಿಸಿರುವ ನಗರ ಕಮೀಷನರೇಟ್‌ನ ಎಸಿಪಿ ಅವರು , ಪ್ರವಾದಿ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದವರ ವಿರುದ್ಧ ಪ್ರತಿಭಟನೆ ಹೆಸರಿನಲ್ಲಿದೇಶಾದ್ಯಂತ ಹಿಂಸೆ ನಡೆಸಿರುವುದನ್ನು ಖಂಡಿಸಿ ನಾಳೆ ಮಂಗಳೂರಿನ ಪಿವಿಎಸ್ ವೃತ್ತದ ಬಳಿ ವಿಹೆಚ್‌ಪಿ ಹಾಗೂ ಬಜರಂಗದಳ ನಡೆಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರತಿಭಟನೆ ನಡೆಸುವ ಬಗ್ಗೆ ಅನುಮತಿ ಕೋರಿಲ್ಲ. ಅದಾಗ್ಯೂ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅನುಮತಿ ನಿರಾಕರಿಸಿದ್ದಾರೆ.