ಪೊದೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಸ್ಪೋಟಕ ಪತ್ತೆ

ಪೊದೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಸ್ಪೋಟಕ ಪತ್ತೆ

Kadaba Times News

ಕಡಬ ಟೈಮ್ಸ್(KADABA TIMES):ಕಲ್ಲಿನ ಕೊರೆಯ ವಠಾರದಲ್ಲಿ ಇರಿಸಿದ್ದ ಅಕ್ರಮ ಸ್ಪೋಟಕ ವಸ್ತುಗಳನ್ನು ವಿಟ್ಲ ಪೊಲೀಸರು ವಶಪಡಿಸಿಕೊಂಡ ಘಟನೆ ವಿಟ್ಲದ ಪುಣಚ ಗ್ರಾಮದ ಎರ್ಮೆತೊಟ್ಟಿ ಎಂಬಲ್ಲಿ ನಡೆದಿದೆ.

ವಿಟ್ಲ ಪೊಲೀಸರು ರೌಂಡ್ಸ್ ನಲ್ಲಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸ್ಪೋಟಕ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ. ಒಂದು ಖಾಲಿ ಮನೆಯ ಬಳಿಯ ಪೊದೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸ್ಪೋಟಕ ವಸ್ತುವಾದ ಜಿಲೆಟಿನ್ ಕಡ್ಡಿಗಳನ್ನು ತುಂಬಿಸಿಟ್ಟಿರುವುದು ಬೆಳಕಿಗೆ ಬಂದಿದ್ದು, ಅವುಗಳನ್ನು ಪೊಲೀಸರು ತನ್ನ ಸ್ವಾದೀನಕ್ಕೆ ಪಡೆದುಕೊಂಡಿದ್ದಾರೆ.

ಜಮೀನಿನ ಬಳಿಯಿರುವ ಕಪ್ಪು ಕಲ್ಲು ಕೋರೆಯ ಕಲ್ಲುಗಳನ್ನು ಸ್ಪೋಟಕ ಬಳಸಿ ಒಡೆಯುವ ಉದ್ದೇಶದಿಂದ ಕೋರೆಯ ಮಾಲಕ ಮಹಮ್ಮದ್ ಕುಂಞಿ ಹಾಗೂ ಬ್ಲಾಸ್ಟರ್ ಅಶೋಕ್ ರವರು ಒಟ್ಟಾಗಿ ಸೇರಿಕೊಂಡು ಸ್ಪೋಟಕಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟಿರುವುದಾಗಿ ಅಂದಾಜಿಸಲಾಗಿದೆ.

ಸ್ಥಳವನ್ನು ಪರಿಶೀಲಿಸಿದಾಗ APEX POWER-90,Explosives(Classs-2) 25mmX125 gms, Manufactured by-A.P Explosives PrivateLimited ಎಂಬುದಾಗಿ ಬರೆದಿರುವ ಜಿಲೆಟಿನ್ ಜೆಲ್-510 ಕಡ್ಡಿಗಳು, ಇದರ ಅಂದಾಜು ಮೌಲ್ಯ 6120 ರೂಪಾಯಿ ಎನ್ನಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top