




ಕಡಬ ಟೈಮ್ಸ್(KADABA TIMES):ತನ್ನ ಕುಲಕಸುಬು ಆದ ದೈವ ನರ್ತನ ಸೇವೆ ಮಾಡಲು ಜ್ಯೋತಿಷಿಯೊಬ್ಬರು ಅಡ್ಡಿಪಡಿಸುತ್ತಿದ್ದಾರೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ದೈವ ನರ್ತಕರೊಬ್ಬರು ಪುತ್ತೂರಿನ ಎಎಸ್‌ಪಿಯವರಿಗೆ ದೂರು ನೀಡಿದ ಅತ್ಯಾಪರೂಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿದೆ.
ಬೆಳ್ಳಾರೆ ನಿವಾಸಿ ಬಾಳಿಲ ಗ್ರಾಮದ ದಿ. ಬಾಬು ಪರವರ ಮಗ ಶೇಷಪ್ಪ ನವರು ದೂರು ನೀಡಿದ ದೈವ ನರ್ತಕ. ಪಂಜದ ದೈವಜ್ಞ ಸತ್ಯನಾರಾಯಣ ಭಟ್ ರವರು ಜಾತಿ ನಿಂದನೆ ಮಾಡಿದ್ದಾರೆ ಹಾಗೂ ಕುಲಕಸುಬು ನಡೆಸಲು ಅಡ್ಡಿಪಡಿಸಿದ್ದಾರೆ ಎಂದು ಅವರು ದೂರಿದ್ದಾರೆ.

ಇವರಿಗೆ ಕ್ಷೇತ್ರದ ತಂತ್ರಿ ಸ್ಥಾನದ ಜವಾಬ್ದಾರಿಯಿದೆ ಎಂದು ಹೇಳುವ ಕೆದಿಲ ನರಸಿಂಹ ಭಟ್ಟರು ಕುಮ್ಮಕ್ಕು ನೀಡಿದ್ದಾರೆಂದು ಆರೋಪಿಸಲಾಗಿದೆ. ಶೇಷಪ್ಪನವರು ಮೇ 4ರಂದು ದೂರು ನೀಡಿದ್ದು ಇದನ್ನು ಸ್ವೀಕರಿಸಿರುವ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ ಬಳಿಕ ಜ್ಯೋತಿಷಿಯವರು ತಲೆಮರೆಸಿಕೊಂಡಿದ್ದಾರೆಂದು ಹೇಳಲಾಗುತ್ತಿತ್ತು. ಬಳಿಕ ಪುತ್ತೂರಿನ ಹೆಚ್ಚುವರಿ ಜಿಲ್ಲಾ ನ್ಯಾಯಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಜಾಮೀನು ಅರ್ಜಿ ತಿರಸ್ಕರಿಸಿದೆ.