




ಕಡಬ ಟೈಮ್ಸ್(KADABA TIMES):ಗುಂಡ್ಯ/ನೆಲ್ಯಾಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಟ್ಯಾಂಕರ್ ಲಾರಿ ಹಾಗೂ ಮಿನಿ ಬಸ್ಸುಗಳ ಮಧ್ಯೆ ಇಂದು(ಜೂ.6)ರ ಬೆಳಗ್ಗೆ ಅಪಘಾತ ಸಂಭವಿಸಿದೆ
ಮೈಸೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಮಿನಿ ಬಸ್ ಹಾಗೂ ಅದೇ ದಾರಿಯಲ್ಲಿ ಬರುತ್ತಿದ್ದ ಟ್ಯಾಂಕರ್ ಲಾರಿಯ ಮಧ್ಯೆ ಅಪಘಾತ ನಡೆದಿದೆ.

ಮಿನಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡುಆಪಾಯದಿಂದ ಪಾರಾಗಿದ್ದಾರೆ.ಗಾಯಾಳುಗಳನ್ನು ತಕ್ಷಣ ನೆಲ್ಯಾಡಿಯ ಅಶ್ವಿನಿ ಆಂಬುಲೆನ್ಸ್ ನಲ್ಲಿ ಕರೆತಂದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.